shreekant.mishrikoti ರವರ ಬ್ಲಾಗ್

ಮನ ಮೆಚ್ಚಿದ ಮಡದಿ - ನಾನು ನೋಡಿದ ಹಳೆಯ ಸಿನಿಮಾ

ಇದು ನಿಜಕ್ಕೂ ಒಳ್ಳೆಯ ಸಿನೆಮಾ - youtube ನಲ್ಲಿದೆ.

ಒಂದೊಂದೇ ನಿಮಿಷದ ಕೆಲವು ದೃಶ್ಯಗಳು ಅನೇಕ ಮಹತ್ವದ ಸಂಗತಿಗಳನ್ನು ತಿಳಿಸುತ್ತವೆ . ಉದಾಹರಣೆಗೆ ಒಂದು ಸಂಸಾರದಲ್ಲಿ ಹುಡುಗನು ಸಿನಿಮಾ ನೋಡಲು ಹಣ ಕೇಳಿದರೆ ಅಲ್ಲಿ , ಮತ್ತೆ contrast ಆಗಿ ಇನ್ನೊಂದರಲ್ಲಿ ನಾನು ಕ್ಲಾಸಿಗೇ ಫಸ್ಟ್ ಆಗಿ ಬಂದಿದೀನಿ ಅಂತ ಹುಡುಗ ಹೇಳಿದಾಗ ಅಲ್ಲಿ ಹಿರಿಯರ ಪ್ರತಿಕ್ರಿಯೆ ಏನು? ಬೇರೆ ಬೇರೆ ಮೌಲ್ಯಗಳು , ಸಂಸ್ಕಾರಗಳು ನಮ್ಮ ಗಮನ ಸೆಳೆಯುತ್ತವೆ.

ಬೆಳೆದ ಮೊಮ್ಮಗನು ತಾತನಿಗೆ ತಿಳಿಸದೆ ತಾತನ ಮನಸ್ಸಿಗೆ ವಿರುದ್ಧವಾಗಿ ಮದುವೆಯಾಗಿ ಮನೆಗೆ ಬಂದಾಗ ಆ ತಾತ ಮತ್ತಿತರರು ನಡೆದುಕೊಳ್ಳುವ ರೀತಿ ಅದ್ಭುತವಾಗಿವೆ. " ಅಲ್ಲಿ ಕಾಣಬರುವ ಸಾಮಾಜಿಕ ಮತ್ತು ಸಾಂಸಾರಿಕ ರೀತಿ ನೀತಿಗಳು ಈ ಕಾಲದಲ್ಲಿ ಗಮನಿಸಿ ಅನುಸರಿಸತಕ್ಕಂತಹವು ಇವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಎಂಜಲ ಬಳಿದ ಶ್ರೀಹರಿ - ಪುರಂದರ ದಾಸರ ಒಂದು ಅಪರೂಪದ ರಚನೆ

ಕಿಂಗ್ ಮೇಕರ್ರೂ , ಸ್ವತಃ ಭಗವ೦ತನೂ ಆದ ಶ್ರೀ ಕೃಷ್ಣನು ರಾಜಸೂಯ ಯಾಗದ ಸಮಯದಲ್ಲಿ ಎಂಜಲು ಬಳಿಯಲೂ ಹಿಂಜರಿಯದ ಸಂಗತಿ ಇಲ್ಲಿದೆ -

ಎಂಜಲವನೆ ಬಳಿದ ಶ್ರೀಹರಿ
ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ

ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ
ಕಟ್ಟಿದ್ದ ಸರಗಳ ಹಿಂದಕೆ ಸರಿಸಿ
ಸರಸರ ಎಲೆಗಳ ತೆಗೆದು ಬಿಸಾಕಿದ
ಕಟ್ಟ ಕಡೆಗೆ ತಾನೆ ಬಳಿದು ನಿಂತ

ಪೊರಕೆಯ ಪಿಡಿದು ಕಸವನೆ ಗುಡಿಸಿ
ಹೆಂಡಿಯ ನೀರೊಳು ಕಲಸಿ ಥಳಿಯ ಹಾಕಿ
ಸಾಲು ಸಾಲಾಗಿ ಮಣೆಗಳನ್ನಿಟ್ಟು ಎಲೆ ಹಾಕಿ
ರಂಗೋಲಿ ಕೊಳವಿಯ ಎಳೆದು ತಾ ನಿಂತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ಯಾಸಾ - ( ಗುರುದತ್ ) ಹಾಡಿನ ಧಾಟಿಯಲ್ಲಿ ರಾಜ್ ಕುಮಾರ್ ಹಾಡು!

1957ರ Pyasa ಚಿತ್ರದಲ್ಲಿನ ಗುರುದತ್ ಅಭಿನಯದ
https://youtu.be/0TnNOVn2HEo
ಈ ಸುಪ್ರಸಿದ್ಧ ಹಾಡಿನ ಧಾಟಿಯಲ್ಲಿ

ರಾಜಕುಮಾರ್ ಅಭಿನಯದ 1962 ರ ಮಹಾತ್ಮಾ ಕಬೀರ್ ಚಿತ್ರ
https://youtu.be/G_OS86a9IjM ದಲ್ಲಿ
43 ನಿಮಿಷಗಳ ನಂತರ ಈ ಕೆಳಕಂಡ ಸಾಲುಗಳ ಹಾಡನ್ನು ಕೇಳಿ

ಮೂಲೋಕದಾ ನಾಥ ಶ್ರೀರಾಮನಮ್ಮ
ಮಹಾರಾಮ ಸಂಕಲ್ಪಕೆದುರಿಲ್ಲವಮ್ಮ
ಅನಾದಿ ಅನಂತ ಅಖಂಡ ಅಪಾರ
ಸದಾ ಭಕ್ತರ ಪಕ್ಷ ಶ್ರೀರಾಮರಕ್ಷ
ಪ್ರಭೋ ರಾಮ್ , ಪ್ರಭೋ ರಾಮ್ , ಪ್ರಭೋ ರಾಮ್ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಈ ನಗೆಹನಿಗಳನ್ನ ಈಗಾಗಲೇ ಕೇಳಿದ್ದರೆ.. (50ನೇ ಕಂತು)

ಇನ್ನೊಮ್ಮೆ ನಕ್ಕು ಬಿಡಿ! ಯಾಕೆಂದರೆ ....
- - - - - -
ಗುಂಪಿನಲ್ಲಿ ಒಬ್ಬ- ನಾನು ಈಗ ಹೇಳಲಿರುವ ನಗೆಹನಿಯನ್ನು ಸಜ್ಜನರಾದ ನೀವು ಯಾರಾದರೂ ಈಗಾಗಲೇ ಕೇಳಿದ್ದರೆ ನನ್ನನ್ನು ತಡೆಯಿರಿ .
ಯಾರೋ ಒಬ್ಬರು ಬಾಯಿ ಹಾಕಿದರು - ನೀವು ಮುಂದುವರೆಸಿ ; ಸಜ್ಜನರಾರೂ ಯಾವುದೇ ನಗೆಹನಿಯನ್ನ ಅದಕ್ಕೂ ಮೊದಲು ಕೇಳಿರುವುದಿಲ್ಲ!
- - - -
- ಕೋಳಿಗಳು ತತ್ತಿ ಇಡುವುದು ಏಕೆ ?
-ಎಸೆದರೆ ಒಡೆದು ಹೋಗುವವಲ್ಲ , ಅದಕ್ಕೆ !
- - - - -
ನ್ಯಾಯಾಧೀಶ - ನೀವು ಗಂಡನಿಗೆ ಕುರ್ಚಿಯಿಂದ ಹೊಡೆದದ್ದೇಕೆ ?
ಮಹಿಳೆ - ಯಾಕೆಂದರೆ ಟೇಬಲ್ ತುಂಬಾ ಭಾರವಾಗಿತ್ತು.
- - - - -
(ನಿಜಕ್ಕೂ ನಡೆದ ಸಂಭಾಷಣೆ )
- ಕಚೇರಿಯ ಕಕ್ಕಸು ಕಟ್ಟಿಕೊಂಡಿದೆ, ತುಂಬಾ ಗಲೀಜಾಗಿದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಬೆರೆತ ಜೀವ - ನಾನು ನೋಡಿದ ಹಳೆಯ ಸಿನಿಮಾ

ಇದು ತುಂಬಾ ಹಳೆಯ ಸಿನಿಮಾ , ಕೆಲವು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ನೋಡಿದೆ.
ಅಲ್ಲಿ ಗಮನಿಸಿದ ಕೆಲವು alliteration ವಾಕ್ಯಗಳು
- ಮಾರ್ಕೆಟ್ ನಲ್ಲಿ ಮೂಸಿ ನೋಡೋ ಮುಠ್ಠಾಳ ಇಲ್ಲ !
- ಭವ್ಯ ಭಾರತದ ಭವಿಷ್ಯ ದ ಬುನಾದಿ ಭದ್ರವಾಗಿರಬೇಕಾದರೆ…
- ಶಿಷ್ಯರಿಗೆ ಕರ್ಣೋಪದೇಶ ಮಾಡುವಾಗ ಕರ್ಕಶವಾದ ಕಂಠಕಹಳೆಯಿಂದ …..
- ಕಸುಬಿಗೆ ತಕ್ಕ ಕಂಕಣ !
- ಮಂಕು ಜನಕ್ಕೆ ಶಂಖದಲ್ಲಿ ಬಂದರೇ ತೀರ್ಥ
ಕೆಲವು ತಮಾಷೆಯ ದೃಶ್ಯಗಳು/ಸಂಭಾಷಣೆಗಳು
1)
ರೋಗಿಯಿಂದ ಡಾಕ್ಟರರ ಯೋಗಕ್ಷೇಮ ವಿಚಾರಣೆ !
- ಡಾಕ್ಟ್ರೇ , ಹ್ಯಾಗಿದೆ ದೇಹಸ್ಥಿತೀ ?
2)
-ತಡೀರಿ , ಸ್ವಲ್ಪ ಕಾಫಿ ತರ್ತೀನಿ.
-ಅದೆಲ್ಲ ಇರ್ಲಿ ಬಿಡಮ್ಮ ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

Pages

Subscribe to RSS - shreekant.mishrikoti ರವರ ಬ್ಲಾಗ್