ಹೀಗಿರಬೇಕು ಆಫೀಸು!

5

ಅಂದದ ಚೆಂದದ ಹೆಣ್ಣಿರಬೇಕು
ಲಕ್ಷಣ ಸುಂದರ ಕಾಣಿಸಬೇಕು
ಹುಡುಗರಿಗಾಗ ಇರುವುದು ಸ್ಫೂರ್ತಿ
ಬಿಡದೆ ಬರುವರು ವರುಷ ಪೂರ್ತಿ

ಬಂದ ಕೂಡಲೇ ನಗೆಯ ಬೀರಲು
ಹುಡುಗರಿರುವರು ಹಗಲೂ ಇರುಳೂ
ಹೇಗಿರುವೇ ಎಂದಾಕೆ ಕೇಳಲು
ಸಾರ್ಥಕ ಜೀವನ ಎಂದೆಣಿಸುವರು

ತುಂಟ ನೋಟವ ಅವಳು ತೋರಲು
ಹುಚ್ಚು ತಳಮಳ ಮನದಲಿ ಎನುವರು
ಕಾಡಿಗೆ ಹಚ್ಚಿದ ಕಂಗಳು ಕಾಣಲು
ಅವಳೇ ಗುರಿಯೆಂದಂದುಕೊಳುವರು

ಕಾಫಿಗೆ ನನ್ನ ಜೊತೆ ಬರಬೇಕು
ಊಟದ ಸಮಯದಿ ಕಂಡರೆ ಸಾಕು
ಹೋಗವ ಮುನ್ನ ಮುಗುಳ ತೋರಿದರೆ
ದಿನವ ಕಳೆಯಲದೆ ಸಾಕೆಂದೆನುವರು

- ಸಚಿನ್. ಎಲ್. ಎಸ್

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

"ಆಕೆಯ ನೆನೆಯುತ ಕನಸನು ಕಾಣುತ ಮರೆತೇ ಬಿಡುವರು ಕೆಲಸವನನವರತ ಬಂದದ್ದಷ್ಟೇ ಹೋದದ್ದಷ್ಟೇ ಲಾಭವು ಮಾತ್ರ ಅಷ್ಟಕ್ಕಷ್ಟೇ ಇಂತೀ ನೀತಿಯ ಕಲಿಯದ ಒಡೆಯ ಖಂಡಿತ ಹೋಲುವ ಬನ್ನೂರ್ ಕುರಿಯ"