ಮುಖಪುಟ / ಬರಹಗಾರರು / ಶಶಿ

ಶಶಿ

shashiag

೨೦೦ ಲೇಖನಗಳು ೦ ಅನುಯಾಯಿಗಳು

ಮಂಕುತಿಮ್ಮನ ಕಗ್ಗ - 200

ಫೆಬ್ರ ೦೯ ಉಲ್ಲೇಖಗಳು ೬೮೬ ವೀಕ್ಷಣೆ

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ಹೊಟ್ಟೆ ತುಂಬಿದ ತೋಳ ಮಲಗೀತು : ನೀಂ ಪೆರರದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ             

ಮಂಕುತಿಮ್ಮನ ಕಗ್ಗ - 199

ಫೆಬ್ರ ೦೯ ಉಲ್ಲೇಖಗಳು ೭೨೯ ವೀಕ್ಷಣೆ

ಪದರಪದರಗಳಿಹುವು ಗಂಟುಗಂಟುಗಳಿಹುವುಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ ?ವಿಧಿಯ ಕೈಚಿತ್ರವದು - ಮಂಕುತಿಮ್ಮ      

ಮಂಕುತಿಮ್ಮನ ಕಗ್ಗ - 198

ಫೆಬ್ರ ೦೯ ಉಲ್ಲೇಖಗಳು ೬೩೨ ವೀಕ್ಷಣೆ

ಸತ್ಯವಂತನನರಸಲೆನುತ ಪೇಟೆಗಳೊಳಗೆಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದುಕೆಟ್ಟುದೀ ಜಗವೇಂದು ತೊಟ್ಟಿಯೊಳೆ ವಸಿಸಿದನುತಾತ್ತ್ವೀಕ ಡಯೋಜೆನಿಸ್ - ಮಂಕುತಿಮ್ಮ    

ಮಂಕುತಿಮ್ಮನ ಕಗ್ಗ - 197

ಫೆಬ್ರ ೦೯ ಉಲ್ಲೇಖಗಳು ೫೮೨ ವೀಕ್ಷಣೆ

ಕನಲ್ಪ ಹುಲಿ ಕೆರಳ್ದ ಹರಿ ಮುಳ್ಕರಡಿ ಛಲನಾಗಅಣುಕು ಕಪಿ ಸೀಳ್ನಾಯಿ ಮೊದಲಾದ ಮೃಗದಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲವಣಗಿಹುವು ನರಮನದಿ - ಮಂಕುತಿಮ್ಮ           

ಮಂಕುತಿಮ್ಮನ ಕಗ್ಗ - 196

ಫೆಬ್ರ ೦೯ ಉಲ್ಲೇಖಗಳು ೬೦೧ ವೀಕ್ಷಣೆ

ಮನುಜಲೋಕವಿಕಾರಗಳನು ನೀನಳಿಸುವೊಡೆಮನಕೊಂದು ದರ್ಪಣವ ನಿರವಿಸೆಂತಾನುಂಅನುಭವಿಪರವರಂದು ತಮ್ಮಂತರಂಗಗಳಅನುಪಮಾಸಹ್ಯಗಳ - ಮಂಕುತಿಮ್ಮ      

ಮಂಕುತಿಮ್ಮನ ಕಗ್ಗ - 195

ಫೆಬ್ರ ೦೯ ಉಲ್ಲೇಖಗಳು ೬೪೦ ವೀಕ್ಷಣೆ

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆಜಗಕೆ ಕಾಣಿಪುದೊಂದು ಮನೆಯ ಜನಕೊಂದುಸೊಗಸಿನೆಳಸಿಕೆಗೊಂದು ತನ್ನಾತ್ಮಕಿನ್ನೊಂದುಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ   

ಮಂಕುತಿಮ್ಮನ ಕಗ್ಗ - 194

ಫೆಬ್ರ ೦೯ ಉಲ್ಲೇಖಗಳು ೬೪೧ ವೀಕ್ಷಣೆ

ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು ?ಆಂತರಗಭೀರಗಳ ತಾನೆ ಕಂಡವರನಾರ್ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ  ಸ್ವಂತಕೇ ದುರ್ದರ್ಶ - ಮಂಕುತಿಮ್ಮ        

ಮಂಕುತಿಮ್ಮನ ಕಗ್ಗ - 193

ಫೆಬ್ರ ೦೯ ಉಲ್ಲೇಖಗಳು ೬೬೭ ವೀಕ್ಷಣೆ

ಪರಮೇಷ್ಠಿ ನಿಜಚಾತುರಿಯನಳೆಯೆ ನಿರವಿಸಿದನೆರಡುಕೈಯಿಂದೆರಡು ಜಂತುಗಳು ಬಳಿಕಇರದೆ ತಾನವನೊಂದುಗೂಡಿಸಲು ಬೆರಗಾಯ್ತುನರಿಯ ವಾನರವು ನರ - ಮಂಕುತಿಮ್ಮ      

ಮಂಕುತಿಮ್ಮನ ಕಗ್ಗ - 192

ಫೆಬ್ರ ೦೯ ಉಲ್ಲೇಖಗಳು ೫೮೦ ವೀಕ್ಷಣೆ

ದೇವದಾನವರ ರಣರಂಗ ಮಾನವಹೃದಯಭಾವ ರಾಗ ಹಠಂಗಳವರ ಸೇನೆಗಳುಭೂವಿಭವೈಅಯಗಳ ಭ್ರಾಂತಿಯಲಿ ಮರೆಯುವರುಜೀವಾಮೃತವನವರು - ಮಂಕುತಿಮ್ಮ           

ಮಂಕುತಿಮ್ಮನ ಕಗ್ಗ - 191

ಫೆಬ್ರ ೦೯ ಉಲ್ಲೇಖಗಳು ೫೬೭ ವೀಕ್ಷಣೆ

ಪಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನತಡಕುವನು ; ತನ್ನಾತ್ಮದುಣಿಸ ಮರೆಯುವನುಒಡಲಿನಬ್ಬರವೇನು? ಆತುಮದ ನಾಣ್ಚೇನು ?ಪೊಡವಿಗಿದೆ ದುಮ್ಮಾನ - ಮಂಕುತಿಮ್ಮ  

ಮಂಕುತಿಮ್ಮನ ಕಗ್ಗ - 190

ಫೆಬ್ರ ೦೯ ಉಲ್ಲೇಖಗಳು ೨೭೯ ವೀಕ್ಷಣೆ

ಅಮೃತಕಣವಂ ಮತ್ಯುಮೃದ್ಘಟದಿ ಬಯ್ತಿರಿಸಿವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿಸಾಮ್ರಜ್ಯಮಧ್ಯದಲಿ ದುರ್ಭಿಕ್ಷವಾಗಿಪುದುಕರ್ಮತೆಯೊ ನಮ್ರತೆಯೊ ? - ಮಂಕುತಿಮ್ಮ    

ಮಂಕುತಿಮ್ಮನ ಕಗ್ಗ - 189

ಫೆಬ್ರ ೦೯ ಉಲ್ಲೇಖಗಳು ೨೮೩ ವೀಕ್ಷಣೆ

ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವಪರಿಪರಿಯ ಫಲಮಧುರಗಳ  ರಸನೆಗುಣಿಪಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವಗುರು ಸೃಷ್ಟಿ ರಸಿಕತೆಗೆ - ಮಂಕುತಿಮ್ಮ