‘ನಂಜುಂಡ’ವನಿಗೊಂದು ಪ್ರಶ್ನೆ
ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ ಉರಿನಂಜ ನೀನದೆಂತು ಕಂಡೆಯೋ? ಕೈಯಲ್ಲಿ ಹಿಡಿದೆಯೋ ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು ನುಂಗಿದೆಯೊ ಔಷಧಿಯ ಗುಳಿಗೆಯಿರಬಹುದೆನ್ನುತ? ನೀಲಮಣಿಯಾಭರಣ ಸೊಗಸೆಂದು ತೊಟ್ಟೆಯೋ ನಂಜುಂಡ...
hamsanandi
ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ ಉರಿನಂಜ ನೀನದೆಂತು ಕಂಡೆಯೋ? ಕೈಯಲ್ಲಿ ಹಿಡಿದೆಯೋ ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು ನುಂಗಿದೆಯೊ ಔಷಧಿಯ ಗುಳಿಗೆಯಿರಬಹುದೆನ್ನುತ? ನೀಲಮಣಿಯಾಭರಣ ಸೊಗಸೆಂದು ತೊಟ್ಟೆಯೋ ನಂಜುಂಡ...
ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ ಕೂಡಲೆಯೆ ಮುಚ್ಚಿಕೊಂಡೆ ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ? ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14): ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ್ತಾಭ್ಯಾಂ ತಸ್ಮಿನ್ದೃಷ್...
ನಿಂತಿಹುದವನರೂಪ ಕಣ್ಣಲ್ಲಿ ಮತ್ತವನ ಸ್ಪರ್ಶವೇ ನೆಲೆಸಿರಲು ಮೈಯಲ್ಲಿ ಮಾತು ಕಿವಿಯಲ್ಲಿರಲು ಮನಸು ಮನಸಲ್ಲಿರಲು ಬೇರೆ ಮಾಡುವುದೇನು ದೈವವಿನ್ನು ? ಪಾಕೃತ ಮೂಲ (ಹಾಲನ ಗಾಥಾ ಸತ್ತಸಯಿ ೨-೩೨) : ರೂಅಂ ಅಚ್ಛೀಸು ಠಿಅಂ ಫರಿಸೋ ಅಂಗೇಸು ಜಂಪಿಅಂ ಕಣ್...
ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನುಭವಕ್ಕೇನ ಮಾಡಲಿ ಗೆಳತಿಯ...
ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ. ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ! ನಾಟಕವನ್ನು ಬರೆದು ನಿರ್ದೇಶಿಸಿ...
ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ ಮುಗುದ ಮೊಗದಾವರೆಯ ನಾಕಾಂಬೆನೆಂದು? ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ ಆಶ್ವಾಸ ೧, ಪದ್ಯ ೪೪):...
ಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ. ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು 'ತೆಲಿಯಲೇರು ರಾಮ ಭಕ್ತಿಮಾರ್...
ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ ಸಂ...
ಹಲವಾರು ದಿನಗಳಿಂದ ಹೆಚ್ಚಾಗಿ ಬರೆಯಲಾಗುತ್ತಿರಲಿಲ್ಲ , ನನ್ನ ನಾಟಕ ಪುಟ್ಟ ಮಲ್ಲಿಗೆ ಎಸ್ಟೇಟ್ ಹೋದವಾರ ರಂಗದ ಮೇಲೆ ಪ್ರದರ್ಶನವಾದ ನಂತರ ಮೊದಲ ರೀತಿಯಲ್ಲೆ ಆಗಾಗ ಬರೆಯತೊಡಗಬಹುದು ಎಂದುಕೊಂಡಿದ್ದೇನೆ. ನಾಟಕ ಚೆನ್ನಾಗಿ ಆಯ್ತು ಅನ್ನೋದು ನನ್...
ನಲ್ಲ ಬಳಿಬಂದು ನುಡಿಯೆ ಸವಿಮಾತುಗಳ ಮೈಯೆಲ್ಲ ಕಿವಿಯಾಯ್ತೊ ಕಣ್ಣಾಯ್ತೊ ಎಂಬುದನು ನಾನರಿಯೆ! ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ, ಪದ್ಯ 64 ) : ನ ಜಾನೇ ಸಮ್ಮುಖಾಯಾತೇ ಪ್ರಿಯಾಣಿ ವದತಿ ಪ್ರಿಯೇ ಪ್ರಯಾಂತಿ ಮಮ ಗಾತ್ರಾಣಿ ಶ್ರೋತ್ರತಾಂ ಕ...
ಮಾಳಿಗೆಯ ಮೇಲವಳು ದಿಕ್ಕುದಿಕ್ಕಲ್ಲವಳು ಹಿಂದುಮುಂದೆಲ್ಲಕಡೆ ಅವಳು ಮಂಚದಾ ಮೇಲವಳು ಹಾದಿಹಾದಿಯಲವಳು ಅವಳಿಂದದೂರವಿರಲಾಗಿ ಹಾಳು ಮನಸಿದಕೇನು ತಿಳಿದೀತು ಅವಳ ಬಿಟ್ಟೇನೊಂದು ಕಾಣದೇನೇ ಅವಳೆ ಅವಳೇ ಅವಳೆ ಅವಳೆ ಜಗವೆಲ್ಲವಿರೆ ಒಂದಾದೆವೆಂಬುದೆಂತು? ಸ...
ಹುಬ್ಬು ಗಂಟಿಕ್ಕಿದ್ದಾಯಿತು ಬಹುಕಾಲ ಕಣ್ಮುಚ್ಚಿರುವುದನು ರೂಢಿಸಿದ್ದಾಯ್ತು ಜೊತೆಗೆ ಅಳುವುದ ಚೆನ್ನಾಗಿ ಕಲಿಸಿದ್ದಾಯಿತು ನಗುವನೊತ್ತಾಯದಲಿ ಮೌನದಲಿ ನಿಲಿಸಾಯ್ತು ಮನಸ ಹೇಗೋ ಗಟ್ಟಿ ಮಾಡುತ್ತ ಕಡುದಿಟ್ಟತನದಲಿ ಕಟ್ಟಿರಿಸಿದ್ದಾಯಿತು ಹಮ್ಮು ಬಿಡ...