ಕೆ.ವಿ. ಅಯ್ಯರ್ "ರೂಪದರ್ಶಿ" ಮತ್ತು "ಶಾಂತಲಾ": ಒಂದು ಅವಲೋಕನ
ಕನ್ನಡನಾಡು ಕಂಡ ಅತ್ಯಂತ ಅಪರೊಪದ ಸಾಹಿತಿಗಳಲ್ಲಿ ಒಬ್ಬರೆಂದರೆ ಪ್ರೊ. ಕೆ.ವಿ. ಅಯ್ಯರ್. ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರಾದರೂ ಪ್ರವೃತ್ತಿಯಿಂದ ಸಾಹಿತಿಗಳಾಗಿದ್ದವರು. ಬಡತನದಿಂದಾಗಿ ಬೆಂಗಳೂರಿನ ಹೋಟೆಲಿನಲ್ಲಿ ಇಡ್ಲಿ, ದೋಸೆ ಹಿಟ್ಟು ರುಬ್ಬುತ...