ಮುಖಪುಟ / ಬರಹಗಾರರು / ಪದ್ಮ.ಎ

ಪದ್ಮ.ಎ

padma.A

೧೨೧ ಲೇಖನಗಳು ೦ ಅನುಯಾಯಿಗಳು

ಮುಗ್ದ ಮನಸ್ಸು

ಅಕ್ಟೋ ೧೫ ಕವನ ೧,೪೦೬ ವೀಕ್ಷಣೆ

ಮನಸ್ಸೆಂಬುದು ಮುಗ್ದಶಿಶುವಿನವೊಲ್ ಮನದೊಡೆಯ ಬೆಳೆಸಿದವೊಲ್  ಬೆಳೆವುದದು   ಮನಸ್ಸಿನೊಡಯ ನೀನೆಂಬರಿವಿರಲಿ    ಮನವನೆಚ್ಚರದಿ ನಡೆಸು-ನನ ಕಂದ||  

ಅರಿವೆಮಗೆ ಬೇಕು

ಅಕ್ಟೋ ೧೨ ಲೇಖನ ೨ ವೀಕ್ಷಣೆ

ಬೆಣ್ಣೆಯಲಿ ಅಡಗಿಹುದು ಹಸನಾದ ತುಪ್ಪ ಮೃಗದೊಡಲೊಳಗಿಹುದು ಕಸ್ತೂರಿ ಸುಗಂಧ ರಸಗಬ್ಬಿನೊಳಗಿಹುದು ಸವಿಯಾದ ಸಿಹಿಯು ಪಡೆವ ಪರಿಯರಿವೆಮಗೆ ಬೇಕು-ನನಕಂದ||

ಸರ್ವಜ್ಞನ ಒಗಟುಗಳು

ಏಪ್ರಿಲ್ ೧೮ ಬ್ಲಾಗ್ ೧೩೧ ವೀಕ್ಷಣೆ

ಸರ್ವಜ್ಞನ ಈ ಒಗಟುಗಳಿಗೆ ಉತ್ತರ ತಿಳಿಸಿ ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು ಹಣ್ಣು ಹನ್ನೆರೆಡು, ಗೊನೆ ಮೂರು, ತೊಟ್ಟೊ೦ದು ಚೆನ್ನಾಗಿ ಪೇಳಿ ಸರ್ವಜ್ಞ II ಹಲವು ಮಕ್ಕಳ ತಂದೆ | ತಲೆಯಲ್ಲಿ ಜುಟ್ಟವದೆ | ಜಾವವರಿವವನ ಹೆಂಡತಿಗೆ| ನೋಡಾ ಸರ್ವ...

ಯುಗಾದಿ ಶುಭಾಶಯಗಳು

ಮಾರ್ಚ್ ೨೧ ಬ್ಲಾಗ್ ೪,೦೩೬ ವೀಕ್ಷಣೆ

ಮಾವು ಬೇವು ಚಿಗುರಿಸುತ ಹೊಂಗೆ ಹೂವನರಳಿಸುತ ಹಕ್ಕಿಗಳನು ಉಲಿಸುತ ಮಕ್ಕಳನು ಕುಣಿಸುತ ಹೆಣ್ಗಳನು ನಲಿಸುತ ತರುಣರನು ತಣಿಸುತ ಮನದ ಕಹಿಯ ಕಳೆಯುತ ಸವಿ ಸವಿಯ ಕನಸ ಬಿತ್ತುತ ಬೇವು ಬೆಲ್ಲ ತಿನಿಸುತ ನವ ಕಾಮನೆಗಳ ಮೂಡಿಸುತ ನವ ಉಡುಗೆಯ ಉಡಿಸ...

ಯುಗಾದಿ ಶುಭಾಶಯಗಳು

ಮಾರ್ಚ್ ೨೧ ಬ್ಲಾಗ್ ೫,೧೧೪ ವೀಕ್ಷಣೆ

ಮಾವು ಬೇವು ಚಿಗುರಿಸುತ ಹೊಂಗೆ ಹೂವನರಳಿಸುತ ಹಕ್ಕಿಗಳನು ಉಲಿಸುತ ಮಕ್ಕಳನು ಕುಣಿಸುತ ಹೆಣ್ಗಳನು ನಲಿಸುತ ತರುಣರನು ತಣಿಸುತ ಮನದ ಕಹಿಯ ಕಳೆಯುತ ಸವಿ ಸವಿಯ ಕನಸ ಬಿತ್ತುತ ಬೇವು ಬೆಲ್ಲ ತಿನಿಸುತ ನವ ಕಾಮನೆಗಳ ಮೂಡಿಸುತ ನವ ಉಡುಗೆಯ ಉಡಿಸ...

ಬರಿದಾಗದಿರಲಿ

ಮಾರ್ಚ್ ೨೬ ಬ್ಲಾಗ್ ೦ ವೀಕ್ಷಣೆ

ಬರಿ ಮೋಡ ಮಳೆಯ ಸುರಿಸದು ಬರಿ ಮಾತೆಂದು ಕಾರ್ಯವೆಸಗದು ಬರಿ ಭರವಸೆಯೆಂದೂ ಫಲವನೀಡದು ಭರಿಸದಿರೆ ಬಾಳು ಬರಿದು-ನನ ಕಂದ||

ಶುಭಕೋರುವ ಯುಗಾದಿ

ಮಾರ್ಚ್ ೨೩ ಬ್ಲಾಗ್ ೩ ವೀಕ್ಷಣೆ

ಶ್ರೀಖರನ ಭರದಿಂ ಹಿಂದೆ ಸರಿಸುತ ನಂದನಾಗಮನ ಹರ್ಷದಿಂದಾಗಿದೆ ದಯೆ ಕರುಣೆ ಮಮತೆಯಿಂ ಬಾಳಿರೆನುತಿದೆ ನಲ್ನುಡಿಗಳಿಂ ನಮ್ಮನೆಲ್ಲ ಹರಸೆ ಬಂದಿದೆ ಸ್ವಾಗತಿಸಿ ಹೊಸ ವರ್ಷವ ಹರ್ಷದಿಂದೆನುತಿದೆ ಗತವೈಭವವ ಮರಳಿತರಲು ಬಯಸಿದೆ ತಿರೆಯ ಸೊಬಗ ಉಳಿಸಿ ಬೆ...

ನವಚೈತನ್ಯದ ಯುಗಾದಿಯ ಆಶಯ

ಮಾರ್ಚ್ ೨೨ ಬ್ಲಾಗ್ ೨ ವೀಕ್ಷಣೆ

ಶ್ರೀಖರನ ಭರದಿಂ ಹಿಂದೆ ಸರಿಸಿ ಸಂಕಷ್ಟಗಳ ಕಳೆಯೆ ಶ್ರೀನಂದನ ಓಡೋಡಿ ಬಂದಿದೆ ಸಂತಸವ ತಂದಿದೆಚೈತ್ರದ ಚಿತ್ತಾರದೊಂಡನೆ ವಸಂತನಾಗಮನವಾಗಿದೆಹೊಸ ವರ್ಷಕೆ ಹೊಸ ಹರ್ಷವ ತಾನೆಲ್ಲಡೆ ಹರಡಿದೆ ನವ ಚಿಗುರಲಿ ನವ ಸಂತಸದ ಪರಿಮಳವ ಬೀರಿದೆತಳಿರನುಂಡ ಕೋಕಿಲ ಕುಹ...

ಶ್ರೀನಂದನ ಯುಗಾದಿ ಶುಭಾಶಯಗಳು

ಮಾರ್ಚ್ ೨೨ ಬ್ಲಾಗ್ ೧೫ ವೀಕ್ಷಣೆ

ಚೈತ್ರದ ಚಿಗುರ ಚಿತ್ತಾರಕೆ ಶಿಶರ ನಾಂದಿಯ ಹಾಡಲುಚೂತ(ಮಾವು)ವನ ಚಿಗುರಿ ನಲವಿಂದ ನಳನಳಿಸುತಿರಲುಕೋಕಿಲವು ಹರ್ಷದಿಂ ಕುಹೂ ಕುಹು ಎಂದಿಹುದುಮಲ್ಲಿಗೆಯು ಬಿರಿದು ಸೌರಭವನೆಲ್ಲಡೆ ಹರಡಿಹುದುಹೊಂಗೆ ಹೂಗೊಂಚಲಲಿ ಝೇಂಕಾರ ಕೇಳುತಿಹುದುಶ್ರೀಖರನು ಕಾಳದಿನಗಳ...

ಅಮ್ಮ

ಮಾರ್ಚ್ ೧೫ ಬ್ಲಾಗ್ ೫ ವೀಕ್ಷಣೆ

ಅಮ್ಮಯೆಂಬ ಎರಡಕ್ಷರದಿ ಎಂಥ ಭಾವವಡಗಿದೆ ಅಮ್ಮಯೆಂಬ ಧ್ವನಿಯಲೆಂಥ ಮಂತ್ರಶಕ್ತಿ ಹುದುಗಿದೆ ಅವಳ ಕೈಯ ಪ್ರತಿ ತುತ್ತು ಅಮೃತಕ್ಕಿಂತ ಹೆಚ್ಚು ಅವಳು ನಮಗೆ ಇತ್ತ ಮುತ್ತು ಜೇನಿನಂತೆ ಇತ್ತು ಅವಳ ಸೆರಗು ಹಿಡಿಯಲೆಂತು ಮನವು ಹಿಗ್ಗುತ್ತಿತ್ತು ಕಂದ...

someಸಾರ

ಮಾರ್ಚ್ ೧೩ ಬ್ಲಾಗ್ ೧ ವೀಕ್ಷಣೆ

some ಸಾರವಿಲ್ಲದಿರೆ ಸೊಗವಿಲ್ಲ ಸಂಸಾರದಲಿ some ಸಾರವಿದೆ ಅರಿತು ನಡೆದೊಡೆ ಸಂಸಾರದಲಿ some ಸಾರವಿರೆ some ತಾಪಕೆಡೆಯೆಲ್ಲಿ ಸಂಸಾರದಲಿ Someಸ್ಕಾರ ಬೇಕು someಸಾರದಲಿ- ನನ ಕಂದ ||

ಹೆಜ್ಜೆ ಗುರುತು

ಮಾರ್ಚ್ ೧೨ ಬ್ಲಾಗ್ ೧೯೯ ವೀಕ್ಷಣೆ

ಸಾಗಿದರು ನಮ್ಮನಗಲಿ ಅವರೆಲ್ಲರೆನುತ ಸಾಗಲನುವಾಗದಿರು ನೀ ಅವರ ಹಿಂದೆ ಸಾಗಲಾಗದು ನಮ್ಮ ಲೆಕ್ಕ ಮುಗಿವತನಕ ಮೌನದಲೆ ಸಾಗಿದರೆನುತ ಅಳಲದಿರು ಮೌನದಿಂ ಕೊರಗಿ ನೀ ಸೊರಗದಿರು ಮುಗಿಸಿಹರು ಅವರೆಲ್ಲರಿಲ್ಲಿಯ ಪಯಣ ಮುಗಿದಿಲ್ಲವಿನ್ನು ಇಲ್ಲಿಯ ನಮ್...