ಮಾನವತೆ ಮರೆಯಾಯಿತು
ಬರಹಗಾರರ ಬಳಗ
ಏಪ್ರಿಲ್ ೨೦, ೨೦೨೬
೬ ವೀಕ್ಷಣೆಗಳು
ಬಂದು ನೋಡಿರಿ ಬಸವಣ್ಣ
ನಮ್ಮೂರ ಬೀದಿಯೊಳಗೆ
ಜಾತಿಯ ಹೊಲಸು
ಇನ್ನೂ ಗಬ್ಬು ನಾರುತ್ತಿದೆ
ತನುವ ಗುಡಿ ಮಾಡಿ
ಅಂಗೈಯಲ್ಲಿ ಲಿಂಗವೆಂದಿರಿ
ಇವರು ತನುವಿನ ಮೂಲೆ ಮೂಲೆಯಲ್ಲಿ
ಜಾತಿಯನ್ನಿರಿಸಿ ಪೂಜೆಗೈದರು
ನೂರು ಜಾತಿಯ ಹೂಗಳನ್ನು
ಕಟ್ಟಿದವರು ನೂರಾರು ಜಾತಿಯವರು
ಅದು ಮುಟ್ಟಲಿಲ್ಲವೇ
ನಿನ್ನ ಶಿವನ ಮುಡಿಯ..?
ಹಣ್ಣು ಕಾಯಿ ಪಚ್ಚೆ ಕರ್ಪೂರ
ಕೊಟ್ಟವರು ನೂರು ಕುಲದವರು
ಅವು ಸಲ್ಲಲಿಲ್ಲವೇ
ನಿನ್ನ ಕೂಡಲ ಸಂಗಮ..?
ನಾ ಶ್ರೇಷ್ಠ ನೀ ಕನಿಷ್ಠ
ಸಮಾನತೆ ಎಲ್ಲಿ ಹೋಯಿತು
ನಾ ಸಬಲ ನೀ ದುರ್ಬಲ
ಇಲ್ಲಿ ಮಾನವತೆ ಮರೆಯಾಯಿತು
-ರೂಪಾ ಹೊಸದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಏಪ್ರಿಲ್ ೨೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬