ಗುಣಗ್ರಾಹಿ
ಬರಹಗಾರರ ಬಳಗ
ಏಪ್ರಿಲ್ ೨೩, ೨೦೨೬
೬ ವೀಕ್ಷಣೆಗಳು
ಪೇರಿಸಿಟ್ಟಿಹ ಕಲ್ಲು ಸಾರಿದೆ
ನನಗೆ ನಾನೇ ಸಾಟಿಯು
ನೀರಿನೋಘವು ಎನಗದಿಹುದೆ
ಹರುಷದೋಕುಳಿಯಾಟವು
ಚೆಲುವ ನೋಟವು ಕಣ್ಣಿಗಾದರೆ
ಪುಳಕ ಮನದೊಳು ಮೂಡಿದೆ
ಒಲವಿನೊಸಗೆಯ ಬೆಳಗು ಬಾನಲಿ
ಹಲವು ಬಣ್ಣವನೆರಚಿದೆ
ಕವಿಯ ಲೇಖನಿ ಹರಿತಗೊಂಡಿತು
ಕಿವಿಯು ಕಂಗಳ ತೆರೆಯುತ
ಬುವಿಯು ಆಗಸ ಒಂದುಗೂಡಿತು
ಸವಿಯ ಮನದಲಿ ತಂದಿತು
ಕಡಲ ಕೊರೆತಕೆ ಮದ್ದದಹುದೇ
ಶುದ್ಧ ಮನದಲಿ ಯೋಚಿಸಿ
ಬಿಡಲು ಬಾರದು ಜನರ ಜೀವವು
ಬದ್ದರಾಗುತ ಚಿಂತಿಸಿ
ಒಡಲಿಗಾಸರೆ ನೀಡ್ವ ಸಾಗರ
ಬದುಕ ಬವಣೆಯ ಕಳೆದಿದೆ
ಮೃಡಗು ಕೃಷ್ಣಗು ಜೀವದಾಸರೆ
ಹೃದಯಪೂರ್ವಕ ನೀಡಿದೆ
-ಕೆ.ಟಿ. ಶ್ರೀಮತಿ, ಮೈಸೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಏಪ್ರಿಲ್ ೨೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬