ಹೊಸ ಬಾಳು ದಿನ ಬರಲು
ಹಳೇ ನೋವು ಮರೆ ಎನಲು
ನೂರಾರು ಕೊಂಡಿಯ ಸಂಕೋಲೆ ಕಳಚಿರಲು
ಚಿಂತ್ಯಾಕೆ ಮಾಡುತಿ ಹೊಸ ಪುಟದ ಆಕೃತಿ ಅದೇ ಗಾಳಿ ಅದೇ ನೀರು
ಹೊಸದಾಗಿ ಹೊಮ್ಮಿರಲು
ಅದೇ ದೇಹ ಅದೇ ಮನಸ್ಸು
ಹೊಸ ಕನಸು ಚಿಮ್ಮಿರಲು
ನೋವ್ಯಾಕೆ ನುಂಗುತಿ ಹೊಸ ಕನಸ ಸಾರಥಿ ಅದೇ ಪೆನ್ನು ಅದೇ ಹಾಳೆ
ಹೊಸ ಪದ್ಯ ಗೀಚಿರಲು
ಅದೇ ಕಣ್ಣು ಅದೇ ಹೃದಯ
ಹೊಸ ಕಲ್ಪನೆಗೆ ತೆರೆದಿರಲು
ಮತ್ತ್ಯಾಕೆ ಆಗುವೆ ನೀ ದೇವದಾಸನ ಮೂರುತಿ - ಕೆಕೆ (ಕೀರ್ತನ್ ಕೆ)