ಶೈಶವ ಹಂತವು ಮಾಸದ ನೆನಪದು ಸಾಸಿರ ನಾಮದ ಗಾನದಲಿ ಶೋಷಿತವಲ್ಲದ ಭೂಷಿತ ಮಜಲದು ತೋಷದಿ ಬೀಗುವ ಯಾನದಲಿ||   ಮಕ್ಕಳ ಕೂಟವು ಪಕ್ಕನೆ ಮಿರುಗುತ ಸಕ್ಕರೆ ಮನದಲಿ ನಲಿಯುವರು ಅಕ್ಕರೆ ಮಾತಿನ ಚಕ್ಕಡಿಯಲ್ಲಿಯೆ ಚೊಕ್ಕದಿ ಕುಣಿಯುತ ಬೀಗುವರು||   ಆಟದಿ ಸ್ಫುರಿಸುತ ಪಾಠದಿ ಕಲಿವರು ನೋಟದಿ ನಗಿಸುತ ಬಿಂಬಿತರು ಓಟದ ಬಯಲಲಿ ಚಾಟಿಯ ಬೀಸುತ ಮೀಟುವ ಹೃದಯದಿ ಶೋಭಿತರು||   ತುಂಟರು ಬಂಟರು ಘಂಟೆಯ ಹೊಡೆಯುತ ಚಿಂಟರ ಚೇಷ್ಟೆಯು ಬಲುಜೋರು ಗಂಟಿಕೆಯಲ್ಲಿಯೆ ಕಂಟಕವಿಲ್ಲದೆ ಕುಂಟಿಕೆಯಾಗದೆ ಮೇಲೇರು||   ಬಾಲ್ಯದ ನೆನಪದು ಕಾಲ್ಯದಿ ಬೆಳಗುತ ಮೌಲ್ಯವ ಕಲಿಯುತ ಬೆಳೆಯುವರು ಮಾಲ್ಯದ ಸಾಲಲಿ ಕೌಲ್ಯವ ಗುಣವದು ಕೂಲ್ಯದಿ ಮಾಸದ ಜೊತೆಯವರು||   ರಸಮಯ ವೇಳೆಯು ಕಸವರದಂತೆಯೆ ನಸುನಗು ಬೀರುತ ಗಣದೊಳಗೆ ಹಸಿರಿನ ರೀತಿಲಿ ಬಸಿರನು ತುಂಬುವ ಜಶದಲಿ ಕುಣಿಯುತ ಮೆರೆಯರು||   ಅಭಿಜ್ಞಾ ಪಿ ಎಮ್ ಗೌಡ