ಮತ್ತೆ ತೆರೆಯಿತು ಶಾಲೆ
ಬರಹಗಾರರ ಬಳಗ
ಮೇ ೩೧, ೨೦೨೪
೯ ವೀಕ್ಷಣೆಗಳು
ಮಾಸಗಳುರುಳಿತು ಹೂಗಳ ಕಾಣದೆ
ರೋಧಿಸುತಿದ್ದಿತು ಹೂಬನವು
ಹಾಡುವ ಕೋಗಿಲೆ ಬಾರದ ನೋವಲಿ
ಇಣುಕುತಲಿದ್ದಿತು ಮಾಮರವು
ಓದುವ ಮಕ್ಕಳು ಬಾರದೆ ಶಾಲೆಯ
ಕಟ್ಟಡಕೆಲ್ಲಿದೆ ಜೀವಕಳೆ?
ಮುಚ್ಚಿದ ಕದಗಳ ತೆರೆಯದ ದಿನಗಳು
ಬಿಡದಲೆ ಕಾಡಿದ ನೋವುಗಳೆ
ದಿನಗಳು ಉರುಳಿದೆ ಬಾಗಿಲು ತೆರೆದಿದೆ
ಇಂದಿಗೆ ಮುಗಿಯಿತು ವನವಾಸ
ಕಲರವದೊಂದಿಗೆ ಸಿಗಲಿದೆ ಶಾಲೆಗೆ
ಹೂಮನ ಮಕ್ಕಳ ಸಹವಾಸ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮೇ ೩೧, ೨೦೨೪
|
ನವೀಕರಿಸಿದ: ಏಪ್ರಿಲ್ ೨೧, ೨೦೨೬