ಅಧೋಗತಿ  ಆದಿ ಶಂಕರ ಉವಾಚ- ತೇನಾ ವಿನಾ ತೃಣಮಪಿ ನಚಲತಿ...   ಹಣದ ಹಪಾಹಪಿ- ಪ್ರಜಾಪ್ರಭುತ್ವ ತಲುಪಿ ಬಿಟ್ಟಿದೆ ಅಧೋಗತಿ! *** ದೋಸ್ತಿಯಲಿ ತಂಟೆ!  ಒಲಂಪಿಕ್ಸ್ ನಲಿ- ಚೀನಾ ಅಮೇರಿಕಾ ಫ್ರಾನ್ಸ್ ಗಳ ಚಿನ್ನದ ಬೇಟೆಯಂತೆ....   ನಮ್ಮಲ್ಲಿ- ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಲೂ ಬಲು ತಂಟೆಯಂತೆ! *** ಬದ್ಧರಾಮಯ್ಯ  ಮೂಡಾ ವಿಚಾರದಲ್ಲಿ ನಾನು  ಯಾವುದೇ ತಪ್ಪು ಮಾಡಿಲ್ಲ- ಸಿದ್ಧರಾಮಯ್ಯ   ಮಾಡಿದ ತಪ್ಪನು ಒಪ್ಪಿಕೊಂಡವರು- ಆಗಿ ಮೆರೆಯುವರು ಬದ್ಧ-ರಾಮಯ್ಯ! *** ನಿಶ್ಚಿಂತರಾಗಿರಿ ಪ್ರಜಾ ಪ್ರಭುಗಳೇ... ಅವರ ವಿರುದ್ಧ ಇವರು; ಇವರ ವಿರುದ್ಧ ಅವರೇ ನಿಂದನೆಯ ಗನ್ನನು ಹಿಡಿದಿರುವಾಗ...   ನಿಮ್ಮದೇನಿದೆ ಅವರಿವರನು ಹಳಿಯುವ ಕೆಲಸ...? ನಿಶ್ಚಿಂತನಾಗಿರಿ ಪ್ರಜಾ ಪ್ರಭುಗಳೇ! *** ರಾಜಕಾರಣಿಗಳೇ ನಿಮಗೇಕೆ ಕೊಡಬೇಕು ಓಟು...?  ನೀವೇನು ಒಲಂಪಿಕ್ಸ್ ಪದಕ ತಂದಿರುವಿರೇ? ವಯನಾಡಿನಲ್ಲಿ ಸಂತ್ರಸ್ಥರನು ರಕ್ಷಿಸಿದಿರೇ...?   ನಿಮಗೇಕೆ ಕೊಡಬೇಕು ಓಟು? ಬರೀ ಹಣವನು ಕೊಳ್ಳೇ ಹೊಡೆಯುವ ಖದೀಮರೇ! *** ಎಚ್ಚರ... ರಾಜಕಾರಣಿಗಳೇ ನಿಮ್ಮ ವೈಯಕ್ತಿಕ ದ್ವೇಶ;ದೂರು ದುಮ್ಮಾನಗಳು ನಮಗೆ ಬೇಕಿಲ್ಲ...   ನಾವು ನಿಮ್ಮನಾರಿಸಿ ಕಳಿಸಿರುವುದು ಆಡಳಿತ ನಡೆಸಲು ಎಂಬುದು ನೆನಪಿರಬೇಕಲ್ಲ? -ಕೆ ನಟರಾಜ್, ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ