ಕಳ್ಳಬೆಕ್ಕಿನ ನಡೆಯು ತಿಳಿದು ಬಂತೇ ನಿನಗೆ ಕಳ್ಳತನದಲಿ ಬರಹ ಕದಿವಂತೆ ನೋಡು| ಸುಳ್ಳು ಹೇಳಲು ಕಲಿತು ಕೃತಿಬೆರಕೆ ಮಾಡಿದರೆ ಹಳ್ಳ ಸೇರುವಿ ನೋಡು -- ಛಲವಾದಿಯೆ|| *** ಯಾರ ನ್ನೂ ಹಗುರ ವಸ್ತುಗಳಂತೆ ಭಾವಿಸದಿರಿ! ಒಂದು ಗ್ರಾಂ ವಜ್ರ ವೂ ಅತ್ಯಂತ ಶ್ರೇಷ್ಠ ! ತಿಳಿ ಯಿ ರಿ ?! *** ಹೇಳುತಿಹರು ಹಲವರು ಪಂಡಿತ ಮಹಾಶಯರು ಆಗಿರಬಹುದು ನಾನು ವಾಲ್ಮೀಕಿಯಾದಂತೆ ! *** ಹಲ ಕೆಲವರ ಮನ ಮನೆಗಳು ಒಳಗೊಳಗೆ ದೊಡ್ಡ ತೂತುಗಳು ಅದಕ್ಕಿಂತ ಸಾವಿರಾರು ಪಾಲು ಉತ್ತಮ ನಾನಾಗಿರಬಹುದು - ಛಲವಾದಿಯೆ !! *** ಹೆಸರಿಗಾಗಿ ಬರೆಯದೆ ಜನರಿಗಾಗಿ ಬರೆಯುತಿರು ಶೋಕಿಗಾಗಿ ತಿರುಗದಿರು ಕೆಲಸಕಾಗಿ ತಿರುಗುತಿರು ಚೆಲುವಿಗಾಗಿ ಧರಿಸದಿರು ಮಾನಕಾಗಿ ಧರಿಸುತಿರು ಒಳ್ಳೆಯದ ಬಯಸುತಿರು -- ಛಲವಾದಿಯೆ ! *** ಚೆಲುವು ಹೊತ್ತಿದ್ದರೂ ಬುವಿಯು ಬರಡಾಗಿದೆ ಮನುಷ್ಯನ ಆಸೆಗೆ ಸಂಪೂರ್ಣ ನಾಶವಾಗಿದೆ ಮಾಳಿಗೆಯಿಂದ ಜಗತ್ತನ್ನು ಅಳೆಯುವವನು ತಲೆಯ ತಗ್ಗಿಸಿ ನೆಲದಿ ನಡೆವಂತಾಗಿದೆ *** ಬರಹಗಾರರು ಮಹಾ ಬುದ್ದಿವಂತರೆಂದು ವಿವೇಕ ಕಳೆದುಕೊಳ್ಳ ಬಾರದು ನಮ್ಮ ಬರಹಗಳನ್ನು ನೋಡಿ ಓದುಗರು ಜ್ಞಾನವನ್ನು ಗಳಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ