ಮುಡಿವ ಗುಲಾಬಿ
ಬರಹಗಾರರ ಬಳಗ
ಅಕ್ಟೋಬರ್ ೩೧, ೨೦೨೪
೯ ವೀಕ್ಷಣೆಗಳು
ನೀ ಮುಡಿವ ಗುಲಾಬಿಯಿಂದ
ನನ್ನ ಮನವು ಅರಳುವುದು
ಹೂವ ಮನಸ್ಸು ನಿನ್ನದು
ಬೇರೆವ ಗುಣವು ನನ್ನದು
ನನ್ನ ನಿನ್ನ ಪ್ರೀತಿಯಿರಲು
ಪ್ರೇಮದೊಳಗೆ ಮಿಂದಿಹುದು
ಜೀವನದ ಪಯಣವಿದು
ಬಹು ದೂರ ಬಂದಿಹುದು
ಬಾನಿನ ಬಯಲಲಿಂದು
ಚಂದ್ರ ತಾರೆ ಸೇರುತಲಿ
ಆಗಸದ ನೀಲಿಯಿಂದು
ಕೆಂಪು ವರ್ಣ ತಾಳಿತಿಂದು
ಬಾಳ ಚೆಲುವು ಅರಳಿತಿರಲು
ತನುವ ಸೆಳೆದು ಬೆಸೆಯಿತಿಂದು
ಸುಂದರವಾದ ಹೃದಯವಿದು
ವೀಣೆ ತಂತಿ ಮೀಟಿಹುದು
ಮತ್ತೆ ಮತ್ತೆ ಸವಿದಿಹುದು
ಜೇನ ಕಂಪ ಹರಡಿಹುದು
ಪ್ರಣಯ ಗೆಲುವ ಕಾಣುತಲಿ
ಒಲುಮೆ ಜೀವ ಪಡೆಯಿತಿಂದು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಅಕ್ಟೋಬರ್ ೩೧, ೨೦೨೪
|
ನವೀಕರಿಸಿದ: ಏಪ್ರಿಲ್ ೨೧, ೨೦೨೬