ಹಾಡು ಹಕ್ಕಿಯೆ ನೀ ಹಾಡು ಎನ್ನ ಒಲವಿನ ನೀ ಹಾಡು ಹಾಡುತಲೆ ನೀ ಸಾಗುತಲೆ ಎನ್ನ ಪ್ರೇಯಸಿಗೆ ನೀ ಹಾಡು   ಮನೆಯ ಹಿಂದಿನ ಒಂಟಿ ಕಲ್ಲಲಿ ಕುಳಿತು ನನ್ನನೆ ನೋಡುತಿದ್ದೆ ಕಣ್ಣ ಸನ್ನೆಲಿ  ಕರೆದು ನನ್ನನು ಹತ್ತಿರಕೆ ಸೆಳೆದೆಯೇಕೆ ?  ಹೇಳೆ ನನ್ನ ಕೋಮಲೆ ?   ರಾತ್ರಿ ಚೆಲ್ಲಿದ ಚಂದ್ರ ಬೆಳಕಲಿ ಮನೆಯ ಮುಂದಿನ ಜಾಲಲಿದ್ದೆ ಹಾಲ ಬಣ್ಣದಿ ಹೊಳೆಯುತಿದ್ದೆ ನಿನ್ನ ಚೆಲುವಿಗೆ ಮರುಳನಾಗಿ ಬಂದು ನಿಂತಿಹೆ ಸನಿಹದಲ್ಲೆ ಹೇಳೆ ನನ್ನ ಕೋಮಲೆ ?   ಮನದ ಮೂಲೆಲಿ ಪ್ರೇಮದೊರತೆಯ ಚಿಮ್ಮಿಸಿ ನೀ ದೂರ ಸಾಗಿದೆ ನನ್ನ ಮರೆತರೂ ನಿನ್ನ ಮರೆಯದೆ ಜೀವ ಸವೆಸಲು ಸಾಧ್ಯವಾಗದೆ ನಿನ್ನ ಹುಡುಕಲು ಹೃದಯದಕ್ಕಿಯ ಕಳಿಸುತಿರುವೆನು ನನ್ನ ಚೆಲುವೆಯೆ ಹೇಳು ನನ್ನ ಕೋಮಲೆ ? -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ