ಗಝಲ್ ೧ ಏಕೆ ಕಾಡುತಿರುವೆ , ಸಖಿಯೆ ? ನೋವ ನೀಡುತಿರುವೆ ಸಖಿಯೆ ?   ಕಷ್ಟದಾ ಕಾರ್ಮೋಡ ,ಕವಿದಾಗ ಬಿಟ್ಟೇಕೆ ಓಡುತಿರುವೆ ಸಖಿಯೆ ?   ಏರಿದಾ , ಮದಿರೆಯ ಮತ್ತಿನಲಿ ಅದೇನ ,ಮಾಡುತಿರುವೆ ಸಖಿಯೆ ?   ಅರಳಿದ ,ಹೂವಂತೆ ನಳ ನಳಿಸಿ ಕ್ಷಣದಿ, ಬಾಡುತಿರುವೆ ಸಖಿಯೆ   ಸಾಕು ಮಾಯೆಯ ಆಟ ನಿಲ್ಲಿಸು ,ಬೇಡುತಿರುವೆ ಸಖಿಯೆ *** ಗಝಲ್ ೨ ಒಬ್ಬನಿಗೆ ಹೆದರಿ ಬದುಕುವುದು ಸ್ವಾತಂತ್ರ್ಯವೆ ? ನಾಯಕನ ಕಾಲಕೆಳಗೆ ತೂರುವುದು ಸ್ವಾತಂತ್ರ್ಯವೆ ?   ಬರಹಗಾರ ಯಾರದೋ ಮರ್ಜಿಗೆ ಬರೆಯುವುದು ಯಾಕೆ ನಾನೇ ಎನ್ನುವವನ ಜೊತೆಗೆ ಬೆರೆಯುವುದು ಸ್ವಾತಂತ್ರ್ಯವೆ ?   ಹುತ್ತದಲ್ಲಿ ಹಾವಿದೆಯೆಂದೂ ತಿಳಿದೂ ಕೈ ಹಾಕುತ್ತೇವೆಯೇ ಅರಿತೂ ತುಳಿಸಿಕೊಂಡು ಬಾಡುವುದು ಸ್ವಾತಂತ್ರ್ಯವೆ ?   ಜೀವನದ ಪಾಠಗಳನ್ನು ಕಲಿತೂ ಕೆಲವೊಮ್ಮೆ ಎಡವುತ್ತೇನೆ ಅತಿಯಾಸೆ ಚಿಂತೆಯಲೇ ಸದಾ ಸೋಲುವುದು ಸ್ವಾತಂತ್ರ್ಯವೆ ?   ಊರ ಬೀದಿಯಲ್ಲಿ ನಾನೀಗ ನಡೆವಾಗ ಅಪರಿಚಿತನಾದೆ ಈಶ ತಲೆ ತಗ್ಗಿಸಿ ಇರುವಾಗಲೂ ಹೀಗೇ ಕೆದಕುವುದು ಸ್ವಾತಂತ್ರ್ಯವೆ ? -ಹಾ .ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ