ಮನಸ್ಸಿನಾಳದ ನೋವುಗಳಿಗೆ ಮುಲಾಮು ಹಚ್ಚುವರಿದ್ದರೆ ಬನ್ನಿ ಅದು ಪ್ರೀತಿಯಿಂದ ಆಗಬೇಕೇ ಹೊರತು ದ್ವೇಷದಿಂದಲ್ಲ    ಮನೆ ಮನದಂಗಳದಲ್ಲಿ ಮಹಾಮಾರಿ ವಕ್ಕರಿಸಿದೆ ನೋಡು ಕೊರೋನಾಕ್ಕಿಂತಲೂ ಭಯಂಕರ ಮನುಷ್ಯರ ಒಳಗೆ ಪ್ರೀತಿಯಿಲ್ಲದ್ದು ಕಾರಣವೂ ಇಲ್ಲದಿಲ್ಲ ? ಮನುಷ್ಯ ಸಂಘಜೀವಿ !   ಹುಟ್ಟುವಾಗ ಮಗು ಅಮ್ಮನ ಅಳಿಸಿ ಹುಟ್ಟುತ್ತದೆ ಅದೇ ಸಾಯುವಾಗ ತಾನೇ ಅತ್ತು ಸಾಯುತ್ತದೆ ಬದುಕೇ ಒಂದು ವಿಚಿತ್ರ ಸಂತೆಯಿದ್ದಂತೆ ಅರಿತುಕೊಂಡರೆ ಅರಿವಿನ ಬಾಳು ಸರಾಗ ! ತರಿದುಕೊಂಡರೆ ಅಮಾವಾಸ್ಯೆಯ ನಗುವಿನಂತೆ ದುಃಖಗಳ ಸಾಗರ !!   ಕಪ್ಪೆಗಳಿಗೂ ಮದುವೆಯಾಗುತ್ತವೆ ಬಾವಿಯಲ್ಲಿ ವಟರ್ ವಟರ್  ! ಇಂದು ಮನುಷ್ಯರಲ್ಲೂ ಮದುವೆಯಾಗುತ್ತದೆ ನಾಳೆಗೆ ಡೈವರ್ಸ್ ಇಲ್ಲೂ ವಟರ್ ವಟರ್!!   ಸಂಬಂಧಗಳು ಪ್ರೀತಿಗಳ ಉಳಿಸುವ ಶಿಕ್ಷಣವಿಂದು ಎಲ್ಲಿದೆ ? ಭಾವನೆಗಳ ಜೀವಂತ ಕೊಲ್ಲುವ ಶಿಕ್ಷಣವೇ ಎಲ್ಲೆಲ್ಲೂ ಇವೆ ! ಅದನ್ನು ಕಲಿತವರ ಮಾನಸಿಕ ನೆಮ್ಮದಿಯೇ ಹಾಳಾಗಿ ಹೋಗಿದೆ ! ಮಾನವೀಯತೆಯ ಬದಲು ಕೊಲೆ ಸುಲಿಗೆ ಭ್ರಷ್ಟಾಚಾರವೇ ದೇಶದಲ್ಲಿ ವಿಜೃಂಭಿಸಿದೆ! ಇಂದಿನ ಜನಕ್ಕೆ ಶಿಕ್ಷಣವೇ ಮಹಾಮಾರಿಯಾಗಿದೆ !   ಇಂದಿನ ಮನೆಗಳಲ್ಲಿ ಯಜಮಾನರೇ ಇಲ್ಲ  ಆದ ಕಾರಣ ಯಜಮಾನಿಕೆಯೂ ಇಲ್ಲ ಅದಕ್ಕೇ ಇರಬೇಕು ?  ಹುಟ್ಟಿದ ಕೂಸಿನಿಂದ ಹಿಡಿದು ಸಾಯುವ ಮುದುಕಿಯವರೆಗೂ ಎಲ್ಲರೂ ಯಜಮಾನರೇ ? ಇದರಿಂದ ಸಂಸಾರ ಸಂಸಾರದೊಳು ಮುಳುಗಿ ನೈಜತೆಯಿಲ್ಲದ  ಪಯಣದೊಂದಿಗೆ ಕೊನೆಗೆ ಮಸಣದ ದಾರಿ ಹಿಡಿಯುತ್ತದೆ !! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ