ಬೆತ್ತಲಾದ ಪಾಕಿಸ್ತಾನ.. ಓ ಕುಟಿಲ ಪಾಕಿಸ್ತಾನೀ ಆಡಳಿತವೇ- ಇಡೀ ಜಗತ್ತಿಗೆ ನಿನ್ನ ನರೀ ಬುದ್ಧಿ ತೋರಿಸಿಬಿಟ್ಟೆಯಲ್ಲೋ...   ಪಾಪಿ ಉಗ್ರರ ಸಂಸ್ಕಾರದಲಿ ಪಾಲ್ಗೊಂಡು ಜಗತ್ತಿಗೇ ಬೆತ್ತಲಾಗಿ- ಸಾಕ್ಷಿಯನೇ ನೀಡಿಬಿಟ್ಟೆಯಲ್ಲೋ! *** ರಾಷ್ಟ್ರ ಭಕ್ತಿ... ನಾಡ ಹೆಂಚಿನ ಮನೆಯಲ್ಲಿರುವವರು- ತಮ್ಮ ಮಕ್ಕಳ ರಾಷ್ಟ್ರ ಸೇವೆಗೆ ಸೈನಿಕರಾಗಿ ಕಳಿಸಿ ರಾಷ್ಟ್ರಭಕ್ತಿಯ ಮೆರೆದರು...   ಮಹಡಿ ಮನೆಯ ಎತ್ತರೆತ್ತರಕೆ ಕಟ್ಟಿಸಿ ಮಕ್ಕಳನ್ನು ಸಾಕಿದವರು- ದುಶ್ಚಟ ; ದುರಭ್ಯಾಸಗಳ ದಾಸರನ್ನಾಗಿ ಮಾಡಿ ಅಹರ್ನಿಶಿ ಕೊರಗಿದರು! *** ಮತ್ತೊಮ್ಮೆ ಬೆತ್ತಲೆ!...  ಮದರಸಾ ವಿದ್ಯಾರ್ಥಿಗಳು ಎರಡನೇ ಹಂತದ ಸೈನಿಕರು- ಪಾಕ್ ರಕ್ಷಣಾ ಸಚಿವನ ಹೇಳಿಕೆ...   ಅಯ್ಯೋ ಹುಚ್ಚಪ್ಪಾ... ಹೋರಾಡಲು ನಿಮ್ಮಲ್ಲಿ ಬಲಿತ ಯೋಧರಿಲ್ಲವೇ ಕಲಿಯುವ ಎಳೆಯ ವಿದ್ಯಾರ್ಥಿಗಳೇ ಆಗಬೇಕೇ...? *** ಜೀವಂತದಲ್ಲಿ ಇಲ್ಲದ್ದು ಸತ್ತ ಮೇಲೆ ಏಕೆ...?  ಅಮ್ಮ ಇರುವವರೆಗೂ ಮನೆಯಲ್ಲಿ- ಎಲ್ಲರೂ ಪರಿಚಾರಿಕೆಯಂತೆ ಕಂಡರು...   ಸತ್ತ ಮೇಲೆ- ಫೋಟೋಗೆ ಭರ್ಜರಿ ಹಾರ ಹಾಕಿ ಪ್ರೀತಿಯ ಹೊಳೆಯನೇ  ಹರಿಸಿದರು! -ಕೆ ನಟರಾಜ್, ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ