ಬೆಳಗೆದ್ದು ಪೂಜಿಸಲು ಕಾದಿರುವೆ ಭಾಸ್ಕರನೆ.. ಮೋಡಗಳು ನಿನ್ನ ಮರೆ ಮಾಡಿ ಕೂತಿರಲು.. ಪಶು ಪಕ್ಷಿಗಳು ನಿನ್ನ ಆಗಮನಕೆ ಕಾದಿರಲು.. ದುಷ್ಟರೂ ಅಟ್ಟಹಾಸವ ಮೆರೆದಿರಲು.. ಶಿಷ್ಟರ ರಕ್ಷಕನೇ ಮತ್ತೊಮ್ಮೆ ಧರೆಗಿಳಿದು ಬಾರೋ.. *** ಬಾನಲಿ ಕರಿಮುಗಿಲ ಕಟ್ಟಿರಲು ಸುಳಿಗಾಳಿ ಜೋರಾಗಿ ಬೀಸಿರಲು ಸಾಗರದ ತುಂಬೆಲ್ಲ ಅಲೆಗಳೆದ್ದಿರಲು ಹವಾಮಾನ ಇಲಾಖೆ ಗಾಳಿಯ ಮುನ್ಸೂಚನೆ ಕೊಟ್ಟಿರಲು.. ಮೀನುಗಾರಿಕೆ ಸಂಘ,ಇಲಾಖೆಗಳು ಎಚ್ಚರಿಕೆ ನೀಡಿರಲು.. ಮೀನುಗಾರ ಸಮುದ್ರಕ್ಕೆ ಇಳಿದಿರಲು.. ಹುಂಬು ಧೈರ್ಯವ ಬಿಟ್ಟು ನಾವೆಲ್ಲರೂ ದಡಕ್ಕೆ ತೆರಳಬೇಕು.. *** -’ಕಡಲಕವಿ’ ಶಿವಾನಂದ ಬಿ ಮೊಗೇರ, ಭಟ್ಕಳ