ಯಾರಲ್ಲೂ ನಿರೀಕ್ಷೆ ಇಡಬೇಡ ಕೊನೆಗೆ ನನ್ನಲ್ಲೂ ! ಸಂದ ಪ್ರಾಯವನು  ಎಣಿಸುತ್ತಾ ಕೂರಬೇಡ ಮನವು ಮೌನವಾಗುವ  ಸಮಯ ಬಂದಿದೆ   ಹಾಗೇ ಪಾರ್ಕಿನ  ಕಲ್ಲು ಬೇಂಚಲ್ಲಿ ಕುಳಿತಿದ್ದ  ಸಮಯ  ಯೌವನದ ದಿನಗಳ ನೆನಪಿಸಿಕೊಳ್ಳಬೇಡ  ಯಾವ ತರುಣಿಯು  ತಿರುಗಿಯೂ ನೋಡಳು !   ಚಿಕ್ಕವನಾಗಿದ್ದಾಗ,  ಪ್ರೀತಿಯಿಂದ ತಿನ್ನುತ್ತಿದ್ದ  ತಿನಿಸುಗಳ ಹೆಸರು  ಇಂದು ನೆನಪು ಮಾತ್ರ ! ಬಂದಿರುವ ರೋಗಗಳ  ನಡುವೆ ದೇಹ ಸತ್ತು ಬದುಕಿದೆ !   ನಮ್ಮ ಕಾಲವೇ ಹಾಗಿತ್ತು  ಹೀಗಿತ್ತು ಅನ್ನುವ ಬದಲು ಈಗಿನ ವ್ಯವಸ್ಥೆಯಂತೆ  ಇದ್ದು ಸಾಗಬೇಕಿದೆ ನಾಡು ಬೆಳೆದಿದೆ ,  ಅದಕ್ಕೆ ತಕ್ಕಂತೆ  ನಾನೂ ಬದಲಾಗಬೇಕಿದೆ !   ಏನು ಬರೆದಿರುವೆನೋ ತಿಳಿಯದು ಜೊತೆಗಾರರ ಹೂಂಕಾರಗಳಿಗೆ  ತಲೆ ಬಾಗುತ ಸಾಗಿರುವೆ ಹುಟ್ಟು ಸಾವು ಇವುಗಳ  ನಡುವೆ ಒಂಟಿಯಾಗಿ ಮಲಗಿಹೆ ಹೊಸ ಜನುಮ ಇದೆಯೋ ಇಲ್ಲವೋ ?  ಈಗ ಉಸಿರಾಡುತ್ತಿರುವೆ ! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ