ಜೀವನದ ಪಯಣ
ಬರಹಗಾರರ ಬಳಗ
ಮೇ ೨೩, ೨೦೨೫
೯ ವೀಕ್ಷಣೆಗಳು
ಜೀವನದಲ್ಲಿನ ಪಯಣವು ಸೂಕ್ಮವು
ಭಾವದ ಜೊತೆಯಲೆ ಜೇನಿಹುದು
ಕಾವನು ಬರುತಲೆ ಹತ್ತಿರ ನಿಲ್ಲಲು
ಪಾವನವೆನುತಲಿ ಗೆಲುವಿಹುದು
ರೋಗದ ನಡೆಯದು ಬೇಡವು ಮನದೊಳು
ರಾಗದ ಚೆಲುವೊಳು ಸಾಗುತಲಿ
ಬಾಗದೆ ಕಾರ್ಯವು ಸಿದ್ಧಿಯ ಪಡೆಯದು
ಯೋಗವ ಮಾಡುತ ಬದುಕುತಲಿ
ಕಾತರ ಬೇಡವು ತನುವಲಿ ನಿತ್ಯವು
ಯಾತನೆ ಪಡೆಯದೆ ಸಾಗುತಲಿ
ಮಾತಿನ ನಡೆಯನು ತಿದ್ದುತ ನಡೆದರೆ
ನಾತವು ಬರದೈ ಬಾಳಿನಲಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮೇ ೨೩, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬