ಆತ್ಮಸಾಕ್ಷಿ
ಬರಹಗಾರರ ಬಳಗ
ಮೇ ೨೩, ೨೦೨೫
೮ ವೀಕ್ಷಣೆಗಳು
ಮತ್ತೆ ಹೇಳುತ್ತೇನೆ
ಮತ್ತೆ ಮತ್ತೆ ಹೇಳುತ್ತೇನೆ
ಹೇಳುತ್ತಲೇ ಇರುತ್ತೇನೆ..
ಕ್ಷಮಿಸಿ.....
ನೀವು ಕೇಳುವ ಪ್ರಶ್ನೆಗೆ
ನೀವು ಬಯಸಿದ
ಉತ್ತರವನ್ನು ನೀಡಲಾರೆ...
ವಿಚಾರಣೆಗೆ ಮುನ್ನವೇ
ಶಿಕ್ಷೆ ಘೋಷಿಸುವ
ನ್ಯಾಯಾಲಯಗಳಲ್ಲಿ
ಸಾಕ್ಷ್ಯ ನುಡಿಯಲಾರೆ...
ಪ್ರಭುತ್ವದ ಪಹರೆಯಲ್ಲಿರುವ
ಸತ್ಯದ ಸೂತಕಕ್ಕೆ..
ಪ್ರಜಾ ಸತ್ತೆಯೆಂದು
ಪರಾಕು ಹೇಳಲಾರೆ...
ಖಾಂಡವ ದಹನಕ್ಕೆ
ಕವಾಯತು ನಡೆಯುತ್ತಿರುವಾಗ..
ಹೂವಿನ ರಕ್ಷಣೆಗೆ
ಮುಳ್ಳಿರುವುದು
ತಪ್ಪೆನ್ನಲೇ?...
ತೋಳಗಳು ತುಪಾಕಿಯೇರಿಸಿ ಹೊಂಚುಹಾಕುತ್ತಿರುವಾಗ...
ಮೇಕೆಗಳಿಗೆ
ಕೊಂಬಿರುವುದು
ತಪ್ಪೆನ್ನಲೇ?
-ಶಿವಸುಂದರ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮೇ ೨೩, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬