ಬರುತ್ತವೆ ನೆನಪುಗಳು ಹೊತ್ತು ಮುಳುಗಿದಾಗ ತನುವಿನೊಳಗೆ ನಡುಕವಿರುತ್ತದೆ ಕತ್ತದುವು ಉಳುಕಿದಾಗ ಹೀಗೆ    ಮೆತ್ತನೆಯ ರತ್ನಗಂಬಳಿಯಲ್ಲಿ ಮುಳ್ಳಿಟ್ಟವನಾರು ದೇಹವಿಂದು ಮುರುಟುತ್ತಲೇ ಯೌವನವು ನಡುಗಿದಾಗ ಹೀಗೆ    ಕನಸುಗಳು ಬೀಳದೆ ಒಲವೆಂದೂ ಚಿಗುರದು ದೇಹಸಿರಿಯು ಬಾಡಿತಿಂದು ಹಬೆಯೊಳಗೆ ಸಿಲುಕಿದಾಗ ಹೀಗೆ    ನನಸಿಲ್ಲದೆ ಒದ್ದಾಟವು ಯೌವನದ ಹುಚ್ಚಿನಲಿ ಪ್ರೀತಿಯದು ಸಿಗದೇ ಹೋಯ್ತು ದ್ವೇಷವನು ಕುಲುಕಿದಾಗ ಹೀಗೆ    ನಡೆಯಿಲ್ಲದೆ ನುಡಿಯದು ಶುದ್ಧವೇ ಈಶಾ ನರಗಳೆಲ್ಲ ಜೋತು ಬೀಳುತ್ತದೆಯೋ ಮನ ಸವರಿದಾಗ ಹೀಗೆ    -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ