ಹಸಿರೇ ಉಸಿರು
ಬರಹಗಾರರ ಬಳಗ
ಜೂನ್ ೦೪, ೨೦೨೫
೧೨೧ ವೀಕ್ಷಣೆಗಳು
ನಾವೆಲ್ಲರೂ ಉಸಿರಾಡಲು
ಶುದ್ಧ ಗಾಳಿಬೇಕು
ಶುದ್ಧ ಗಾಳಿ ಬರಲು
ಭೂಮಿ ಮೇಲೆ ಗಿಡ
ಮರಗಳಿರಬೇಕು
ಧರಣಿಗೆ ಮಳೆ ಬರಲು
ಗಿಡ, ಮರಗಳಿರಬೇಕು
ನಾವೆಲ್ಲರೂ ಇದ್ದ
ಜಾಗದಲ್ಲಿ ಗಿಡ,
ಮರ ನೆಡಬೇಕು
ಧಣಿದು ಬರುವಾಗ ನೆರಳು
ನೀಡಲು ಮರಗಳಿರಬೇಕು
ನಾವೆಲ್ಲರೂ ಮರಗಳ
ಕಡಿಯದೆ ಗಿಡ ಮರ
ಬೆಳೆಸಬೇಕು
ನಾವೆಲ್ಲರೂ ನಮ್ಮ
ಪರಿಸರವ ಸ್ವಚ್ಛ
ವಾಗಿಡಬೇಕು
ಭೂಮಿಯ ಹಸಿರಾಗಿಡಲು
ಪ್ರಯತ್ನ ಮಾಡಬೇಕು
ಜೂನ್ ೫ ವಿಶ್ವ ಪರಿಸರ ದಿನದ ಶುಭಾಶಯಗಳು
-’ಕಡಲಕವಿ’ ಶಿವಾನಂದ ಬಿ ಮೊಗೇರ, ಭಟ್ಕಳ
ಪ್ರಕಟಿಸಿದ: ಜೂನ್ ೦೪, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬