ಅಭೇದ್ಯ...!  ಗದಗದಲ್ಲಿ ಸಿದ್ದರಾಮಯ್ಯಗೆ. ಮುಜುಗರ- ಕಾಲು ನೋವಿನಿಂದ ಮೆಟ್ಟಿಲು ಹತ್ತಲು ಅಸಾಧ್ಯ...   ಯಾರ ಮುಂದೆ ಗೆದ್ದು ಬೀಗಿದರೂ- ಈ ದೇಹ ಪ್ರಕೃತಿಯ ಮುಂದೆ ನೋ...ನೋ... ಅಭೇದ್ಯ! *** ಮಿತಿಯಿರಲಿ... ಆರ್ ಸಿ ಬಿ- ಈ ಸಾರಿ ಕಪ್ ನಮ್ದೇ... ಈ ಅಮೂಲ್ಯವಾದ ಪ್ರಾಣವೂ ನಿಮ್ದೇ...   ಅತಿರೇಕದ ಹುಚ್ಚಾಟವಿರದಿರಲಿ ಯುವಜನಾಂಗವೇ... ಸಂಭ್ರಮಾಚರಣೆಗೂ ಒಂದು ಮಿತಿಯಿರಲಿ! *** ತಲೆದಂಡ... ಆರ್ ಸಿ ಬಿ ಸಂಭ್ರಮಾಚರಣೆ- ತಲೆದಂಡ ತಲೆದಂಡ... ಸರ್ಕಾರ ತನ್ನ ತಲೆ ಉಳಿಸಿಕೊಳ್ಳಲು ತಲೆದಂಡ...   ತನ್ನ ಬೇಜವಾಬ್ದಾರಿ ತಪ್ಪಿಸಿಕೊಳ್ಳಲು- ಪಾಪದ ಪೋಲೀಸರ ತಲೆದಂಡ; ಜನ ನಿಮ್ಮ ಕಿತ್ತೆಸೆದಾರು ಎಚ್ಚರಿಕೆಯೆಂದ! *** ಓದಿನ ಮೋಜು!  ಸಿನಿಮಾ ನಟ; ಕ್ರಿಕೆಟ್ ಆಟಗಾರರಿಗೆ ಸಿಗುವ ಅಭಿಮಾನಿಗಳ ಸ್ವಾಗತ ಕವಿಗಳಿಗೆ ಏಕೆ ಸಿಗುತ್ತಿಲ್ಲ?- ಅಕೆಡಮಿ ಅಧ್ಯಕ್ಷ ಎನ್ ಎಲ್ ಮುಕುಂದರಾಜು   ಓದಿನ ಸುಖವನರಿಯದ ಮೂಢರು; ಕಷ್ಟಪಡದೆ ಸುಖವ  ಬಯಸುವ ಜಾಣರು... ಬೇಕವರಿಗೆ  ಸುಲಭದ ಮೋಜು! -ಕೆ ನಟರಾಜ್, ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ