ಮಳೆ ನಿಂತಾಗ  ಅವಳ ಪ್ರತೀಕಾರವಿತ್ತು; ಮನಸಿನಲಿ ಮೂಡಿದ  ನೂರೆಂಟು ಪ್ರಶ್ನೆಗಳ  ಹನಿಗಳು  ಇನ್ನೂ ಮೋಡದಲ್ಲೇ  ಉಳಿದಿತ್ತು..   ಊಹೆಗೆ ನಿಲುಕದ  ಮೂರ್ಕಾಸಿನ ಬದುಕು  ಬದುಕಿದ್ದಷ್ಟೂ ವನವಾಸ; ನಗುವೆಂದರೆ  ಎಂದೋ ಮೂಡುವ  ಕಾಮನ ಬಿಲ್ಲು..   ಕಡೆ ಪಕ್ಷ ಕೊಚ್ಚಿಹೋದರೂ  ಅಡ್ಡಿಯಿರಲಿಲ್ಲ  ಸೋನೆಯೇ ಸಂಕಟ  ದೂರಮಾಡಿದರೆ  ಅದಕಿಂತ ಮಿಗಿಲಾದ  ಅತ್ಯಾಪ್ತರಿಲ್ಲ..   ಸಿಕ್ಕು ಹಿಡಿದ ಕೂದಲಿಗೂ  ಮಲ್ಲಿಗೆಯ ಪರಿಚಯವಿತ್ತು; ಎಂದೋ ನೇಪಥ್ಯಕೆ ಸೇರಿದ  ಅವನ ಚಿತ್ರಪಟ  ಹಳೇ ಊದು ಕಡ್ಡಿಯ  ಉಪಸ್ಥಿಯ ಹಂಗಿಸುತ್ತಿತ್ತು..   ಮಳೆ ಮತ್ತು ಬದುಕಿನ  ಜುಗಲ್ಬಂಧಿಗೆ  ವಿಧಿಯೇ ತೀರ್ಪುಗಾರ; ನಗು ಮತ್ತು ಅಳುವಿನಲ್ಲಿ  ಅರಳಿದ್ದು  ಮಲ್ಲಿಗೆ ಮಾತ್ರ.. -ಸನಂ. ಚಿತ್ರ ಕೃಪೆ: ಇಂಟರ್ನೆಟ್ ತಾಣ