ಬಾವನೆ ಇರುವಲ್ಲಿ ಪ್ರೀತಿ ತಾನ್ ಬರುವುದು ಖುಷಿಯ ವಿಚಾರಗಳು ನಮ್ಮೊಳಗೆ ಇರುವುದು ಏನನ್ನು ಸಾಧಿಸಬಹುದು ದ್ವೇಷ ಅಸೂಯೆಯಿಂದ  ಕೈಹಿಡಿದು ಸಾಗುತಿರೆ ಒಲವಿಂದು ಸೇರುವುದು  * ಉಪ್ಪು ಖಾರ ಹುಳಿ ತಿಂದ ದೇಹವು  ತಪ್ಪು ಮಾಡಿದರೂ ಒಳ ಮರೆವು ಮಾಡುತ್ತಾ , ಇನ್ನೊಬ್ಬನ ತಪ್ಪ ಹೇಳಿದರೆ  ಸತ್ಯಕ್ಕೂ ಮತ್ತೆ ಬಂದೀತೆ ಅರಿವು  * ಜೀವನವು ಜಂಜಾಟ  ಬದುಕಿನಲಿ ಬರಿಯಾಟ ಹೊತ್ತಾರೆ ಎದ್ದರೂ ಬಾಳಿನೊಳು ಗೋಳಾಟ  * ಯಾರು ದೊಡ್ಡವರು ಸಣ್ಣವರು ಯಾರದು  ಅವರವರ ಕೌಶಲ್ಯವು ಅವರವರಿಗೆ ಇಹುದು ಸಣ್ಣತನ ತೋರದಿರಿ ನೀವಿಂದು ದೊಡ್ಡವರೆ  ಅವರಿಂದಲೂ ಸಣ್ಣವರೆ ಮನದೊಳಗೆಯಿಂದು  -ಹಾ. ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಅಂತರ್ಜಾಲ ತಾಣ