ಕನಸಿನೂರಿಗೆ ಒಮ್ಮೆಯಾದರೂ.. ನಿನ್ನೊಡನೆ  ಹೋಗಿದ್ದರೆ... ಎಷ್ಟು ಚೆಂದವಿತ್ತು.!   ಒಲವಿನರಮನೆಯಲ್ಲಿ  ಪ್ರೇಮಸಿಂಹಾಸನದಿ ಕರಪಿಡಿದು ಕುಳಿತು ಜೊತೆ ಬೀಗುತ್ತಿದ್ದರೆ... ಅದೆಷ್ಟು ಸೊಗಸಿತ್ತು.!   ಮಧು ಕಾವ್ಯಧಾರೆಯಲಿ ಮೆಲ್ಲ ನೆನೆಯುತ್ತ  ನನ್ನದೇ.. ಸಾಲುಗಳಿಗೆ ಹೆಜ್ಜೆ ಹಾಕುತ್ತಿದ್ದರೆ ಎಂತಹ ಮುದವಿತ್ತು.!   ಪ್ರತಿಪದ ಪದವು  ಪದ್ಯಗಳಾಗಿ ಹೃದ್ಯವಾಗಿ ನೋಟ ನಗೆ ವೇದ್ಯವಾಗಿ   ಭಾವವೀಣೆಯಾಗಿದ್ದರೆ.. ಅದೆಂತ ಹಿತವಿತ್ತು.!   ಜಗದ ಜಾತ್ರೆಯಲಿ  ಕಳೆದುಹೋದ ನೀನೊಮ್ಮೆ ಸಿಗಬೇಕಿತ್ತು.! ಕನಸಿನೂರಿಗೆ ನಾವೊಮ್ಮೆ  ಒಟ್ಟಾಗಿ ಹೋಗಬೇಕಿತ್ತು.!   -ಎ.ಎನ್.ರಮೇಶ್.ಗುಬ್ಬಿ. ಚಿತ್ರ ಕೃಪೆ: ಇಂಟರ್ನೆಟ್ ತಾಣ