ಮುಕ್ತ
ಬರಹಗಾರರ ಬಳಗ
ಜುಲೈ ೨೩, ೨೦೨೫
೬ ವೀಕ್ಷಣೆಗಳು
ದೇವರ ಗುಡಿ ಮೆಟ್ಟಿಲು
ಏರುತ್ತಲೇ ಇದ್ದೇನೆ
ದರ್ಶನವಾಗುತ್ತಿಲ್ಲ
ಅಲ್ಲಿ ಉಳಿದಿರುವುದು ಬರೀ
ಕಲ್ಲು ಗದ್ದಿಗೆ.
ಆದರೂ ಹುಡುಕುತ್ತಿದ್ದೇನೆ ಛಲ
ಬಿಡದ ತ್ರಿವಿಕ್ರಮನಂತೆ
ಬೆಳಕು ಕಂಡೀತೆ ? ಕತ್ತಲಾವರಿಸಿದ
ಗರ್ಭ ಒಡಲೊಳಗಿಸಿಕೊಂಡಂತೆ
ಅರಿಷಡ್ ವರ್ಗ ವಾಸನೆ ನರ
ನರಗಳ ವ್ಯಾಪಿಸಿ ವಿಷವೆಲ್ಲ ಮೌನ.
ಹೂ, ಪತ್ರಿ, ವಿಭೂತಿ, ಗಂಧ
ಅರ್ಪಿಸಿದರೂ ಮನ ನಿಲ್ಲದ ಡೊಂಬರಾಟ
ಮತ್ತೆ ಕಂಡೀತೆ ಭಕ್ತಿ ಸುಧೆ
ಏಕಾಗ್ರತೆಯ ಚಕ್ರವ್ಯೂಹದಲ್ಲಿ
ನಾನಾರೆಂಬ ಅರಿವಿನ ಗರಿ ಕನಸು
ಚಿಗುರೀತೆ? ಜೀವನಮುಕ್ತ ಭಾವ.
ಅಘೋಚರ ಶಕ್ತಿ ಗೋಚರಿಸೀತೆ ?
ಬಯಲೊಳು ಸಿಗದ ವಾಯು
ಅಂತರಾತ್ಮಕೆ ಇಳಿದು
ಚೇತನ ಶೀಲ ಬೆಳಕು
ಲಿಂಗದಲ್ಲಿ ಲೀನವಾಗಿ
ಕಾಯುತ್ತಿದ್ದೆನೆ ಆತ್ಮ ಪರಮಾತ್ಮ
ಕರುಣೆಗಾಗಿ
ಈ ಜೀವ
ಸಾವಿಲ್ಲದ ನೋವ
-ಬಸವರಾಜ ಜಿ. ಕನ್ನೂರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜುಲೈ ೨೩, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬