ಒಂದು ಗಝಲ್
ಬರಹಗಾರರ ಬಳಗ
ಆಗಸ್ಟ್ ೦೯, ೨೦೨೫
೨ ವೀಕ್ಷಣೆಗಳು
ದೊಡ್ಡವರ ಸಣ್ಣತನದ ಕೊಂಕು ಮಾತುಗಳಿಗೆ ಧನ್ಯವಾದಗಳು
ಸಣ್ಣವರ ಬೆಳಗಬೇಕೆಂಬ ಮನಸುಗಳಿಗೆ ಧನ್ಯವಾದಗಳು
ವಿಚಿತ್ರ ಮಾತು, ಮನುಷ್ಯರ ವರ್ತನೆಗೆ ಬೆಲೆಯಿದೆಯೇನು
ಆಚಾರ ವಿಚಾರಗಳ ಜೊತೆಯ ಕನಸುಗಳಿಗೆ ಧನ್ಯವಾದಗಳು
ಬೆಲೆ ಕೊಡದ ಜನರಿಂದ ಹಾಗೆಯೇ ದೂರ ಸರಿಯಬೇಕು
ವರ್ತಮಾನದ ಎಡೆಗೆ ನಡೆವ ಹೃದಯಗಳಿಗೆ ಧನ್ಯವಾದಗಳು
ವಾದ ವಿವಾದಗಳು ಮನುಷ್ಯರ ಬದುಕಿನ ಒಂದು ಭಾಗವು
ಇಚ್ಛಿತ ಶಕ್ತಿಯ ಜೊತೆಗಿರುವ ಒಲುಮೆಗಳಿಗೆ ಧನ್ಯವಾದಗಳು
ಬ್ರಹ್ಮಾಂಡದ ಒಟ್ಟಿಗಿರುವ ಜೀವಿಗಳಿಗೆ ನಮನಗಳು ಈಶಾ
ಮೂರೂ ತಡಿಕೆಯ ತನುವಿನ ನನಸುಗಳಿಗೆ ಧನ್ಯವಾದಗಳು
-ಹಾ.ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಆಗಸ್ಟ್ ೦೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬