ಹನಿಗಳು ಸರ್ ಹನಿಗಳು !
ಬರಹಗಾರರ ಬಳಗ
ಆಗಸ್ಟ್ ೧೨, ೨೦೨೫
೨ ವೀಕ್ಷಣೆಗಳು
ಸೂರ್ಯನು ಮೂಡುವಾಗ
ಕೋಳಿಯು ಕೂಗುವಾಗ
ರೈತ ಹೊರಟನಾಗ
ಗದ್ದೆ ಉಳುವನಾಗ
ವಿಮರ್ಶೆ,ನೀ ಕವಿಗೆ
ತಿಳುವಳಿಕೆ ಕೊಡು
ತಪ್ಪನ್ನು ತಿದ್ದುತಲೆ
ಒಪ್ಪತನ ಕಲಿಸು !
*
ಬುದ್ದಿಯಲ್ಲಿ
ಬೆತ್ತಲಾದವರ
ಬರಹಗಳೂ
ಬೆತ್ತಲಾಗಿರುತ್ತವೆ !
*
ಬರೆದದ್ದು
ಸರಿ
ವಾದಿಸಬೇಡಿ
ತಪ್ಪುಗಳೂ
ಇರ
ಬಹುದು !
*
ಬರಹಗಳ
ಅರಿವಿಲ್ಲದೆ
ಮಾತಾಡಬೇಡಿ
ಮೌನವಾಗಿರಿ !
*
ವಿಮರ್ಶೆ
ಬರಹಗಳಿಗಿರಲಿ
ವಿಷವಾಗದಿರಲಿ !
*
ಜನಸಾಮಾನ್ಯ
ನಮ್ಮ ದೇಶಕ್ಕೆ
ಸ್ವಾತಂತ್ರ್ಯ
ಸಿಕ್ಕಿದರೂ
ಉಳ್ಳವರ ಕಾಲ
ಕೆಳಗಿನ ಕಸವಾಗಿ
ಇಂದಿಗೂ
ಬದುಕುತ್ತಿದ್ದಾನೆ !
*
ನಾಡಿನಲ್ಲಿ
ವರುಷಗಳು
ಉರುಳಿದಂತೆ
ಸರಕಾರ
ವೇ
ಬದಲಾವಣೆ
ಜನರಿಗೆ
ಎಲ್ಲಾ
ಭಾಗ್ಯಗಳು
ದೊರಕುತ್ತಿವೆ
ಆದರೆ
ಅಗತ್ಯವೆನಿಪ
ರಸ್ತೆ ಭಾಗ್ಯವು
ದೊರಕಲೇ
ಇಲ್ಲ
ಛಲವಾದಿಯೆ !
*
ಯಾರ ಭಾವನೆಗಳು
ಯಾವ ನದಿಗಳಂತೆ
ದುಮ್ಮುಕ್ಕಿ ಹರಿಯುವ
ಜಲ ಪಾತಗಳಂತೆ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಆಗಸ್ಟ್ ೧೨, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬