ಒಂದು ಗಝಲ್
ಬರಹಗಾರರ ಬಳಗ
ಆಗಸ್ಟ್ ೧೪, ೨೦೨೫
೩ ವೀಕ್ಷಣೆಗಳು
ದೇಹದಲಿ ಪ್ರೀತಿಯೊರತೆ ಉಕ್ಕಿದೆ, ಬಾರೆಯಾ ಸಖ
ಚಂದಿರನ ಸವಿಯ ಬೆಳದಿಂಗಳನು, ತಾರೆಯ ಸಖ
ಕೋಗಿಲೆಯ ಸುಸ್ವರಕೆ ಮರವು,ಚಿಗುರಿದೆ ಯಾಕೆ
ನನ್ನೊಳಗೆ ಕಾಣುವ ಒಲವಿಗೂ,ಬಾಗೆಯಾ ಸಖ
ಒಪ್ಪ ಇರುವಲ್ಲಿ ವಪ್ಪಿ,ಸಿಗಲಾರನೇ ನನಗಿಂದು
ತಪ್ಪು ಇದ್ದರೂ, ಸಹಿಸಿಕೊಂಡು ಹೋಗೆಯಾ ಸಖ
ಕಡಲ ಮುತ್ತಿನ ರೀತಿಯೇ,ಹೊಳೆವ ತನುವ ನೋಡು
ಹೃದಯ ನಲ್ಮೆಯ ಜೊತೆ, ಕೈಹಿಡಿದು ಸಾಗೆಯಾ ಸಖ
ಕನಸಿಂದು ಹೀಗೆಯೇ ಮುರುಟಬಾರದು ಈಶಾ
ನನಸಿಂದು ಬರುತಿರಲು, ನನ್ನೊಡನೆ ಸೇರೆಯಾ ಸಖ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಆಗಸ್ಟ್ ೧೪, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬