ಒಂದು ಗಝಲ್
ಬರಹಗಾರರ ಬಳಗ
ಸೆಪ್ಟೆಂಬರ್ ೦೭, ೨೦೨೫
೨ ವೀಕ್ಷಣೆಗಳು
ನೆಟ್ಟು ಮರವಾಗಲು ಕೆಟ್ಟ ಭಾವನೆಗಳ ಸುಡು
ಬಟ್ಟೆ ಶುಭ್ರವಾಗಲು ಕೆಟ್ಟ ಭಾವನೆಗಳ ಸುಡು
ಕಟ್ಟಿ ಇಡಲಿಂದು ಏನು ಉಳಿದಿದೇ ಹೇಳು
ಕಟ್ಟೆ ಕಟ್ಟುವಾಗಲು ಕೆಟ್ಟ ಭಾವನೆಗಳ ಸುಡು
ಹೊಟ್ಟೆ ಹೊಲಸಾದರೆ ಔಷಧಿಯ ತೆಗೆದುಕೊ
ತಟ್ಟೆ ಇಡುವಾಗಲು ಕೆಟ್ಟ ಭಾವನೆಗಳ ಸುಡು
ಸಿಟ್ಟು ಮಾಡದೆಯೇ ಬದುಕುವುದನ್ನು ಕಲಿಯೊ
ಹಿಟ್ಟು ನಾದುವಾಗಲು ಕೆಟ್ಟ ಭಾವನೆಗಳ ಸುಡು
ಬಿಟ್ಟು ಬಾಳದೆಯೇ ಒಂದಾಗಬೇಕಿಂದು ಈಶಾ
ಮೆಟ್ಟು ಬಿಡುವಾಗಲು ಕೆಟ್ಟ ಭಾವನೆಗಳ ಸುಡು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೦೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬