ಒಂದು ಗಝಲ್
ಬರಹಗಾರರ ಬಳಗ
ಸೆಪ್ಟೆಂಬರ್ ೧೪, ೨೦೨೫
೫ ವೀಕ್ಷಣೆಗಳು
ಬದುಕು ಕಟ್ಟುವ ಸಮಯ, ನೆಲೆಯಿದೆಯೇ ಸಖಿ
ಮೀನು ಹಿಡಿಯುವ ಚಟಕೆ, ಬಲೆಯಿದೆಯೇ ಸಖಿ
ಜೀವನದ ತುಂಬೆಲ್ಲ ,ಹೋರಾಟವೇ; ಕಂಡಿದೆ ಯಾಕೆ
ಹುಡುಕಾಟದ ನಡುವೆ ,ಸೆಳೆತದ ಅಲೆಯಿದೆಯೇ ಸಖಿ
ಕರುಣೆಯಿಲ್ಲದ ಹೃದಯ ಹೀನರ, ಜೊತೆಗೇ ನಾನಿರುವೆ
ಸೌಂದರ್ಯ ಇದೆ ,ಸೇರುವಂತಹ ಕಲೆಯಿದೆಯೇ ಸಖಿ
ಭಿನ್ನಾಣವ ಬಯಸಿ ಬಂದವರಿಗೆ, ಯಾರೂ ಇಲ್ಲವೇನು
ಹರುಕು ಸವಿಮಾತಿನ ಸೊಗಡಿಗೆ, ಬೆಲೆಯಿದೆಯೇ ಸಖಿ
ಮತಿಯಿರದ ಭಾವಗಳಿಗೆ, ಒಲವಿಂದು ಬೇಕೇ ಈಶಾ
ಮಧುರ ಸ್ಪಂದನೆಗೆ ಚಿಂತಿಸುವ, ತಲೆಯಿದೆಯೇ ಸಖಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೧೪, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬