ಒಂದು ಗಝಲ್
ಬರಹಗಾರರ ಬಳಗ
ಸೆಪ್ಟೆಂಬರ್ ೧೬, ೨೦೨೫
೫ ವೀಕ್ಷಣೆಗಳು
ತಾನು ಮಾತ್ರ, ಸರಿ ಎನ್ನುವವರ ದೂರ ಇಡು
ಕಾರ್ಯ ವಾಸಿ, ಕಾಲು ಹಿಡಿವವರ ದೂರ ಇಡು
ತನ್ನಿಂದಲೇ, ಸಾಹಿತ್ಯವು ಬೆಳಗೀತು ಹೇಳುವರೇ
ಅಂಥವರು, ಸತ್ಯವ ತಿನ್ನುವವರ ದೂರ ಇಡು
ಬೆಳದಿಂಗಳ ರಾತ್ರಿ, ಸೂರ್ಯ ಬಂದ ಎನ್ನುವುದೇ
ಹೆಂಡತಿ ಇದ್ದರೂ, ಕಾಡುವವರ ದೂರ ಇಡು
ಬೆತ್ತಲೆ ಮಲಗುವರ, ಕರ್ಮಗಳು ಎಷ್ಟಿದೆಯೋ
ತಪ್ಪುಗಳ ಮಾಡುತ್ತಾ,ಬೇಡುವವರ ದೂರ ಇಡು
ಕಾಸಿಲ್ಲದೇ, ಬದುಕು ಸಾಗದಿರುವ ಕಾಲ ಈಶ
ಕೇಸಿದ್ದಾಗಲೇ ಬೇಲಿ ಹಾರುವವರ ದೂರ ಇಡು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೧೬, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬