ತನ್ನವರಿಗೆ ಪ್ರೀತಿಯನು ಕೊಡು ಒಲವನ್ನೇ ಗಳಿಸುವೆ ಅನ್ಯರಿಗೆ ಜ್ಞಾನವನು ನೀಡು ಪ್ರೇಮವನ್ನೇ ಗಳಿಸುವೆ   ಹಿರಿಯರಿಗೆ ನಮಿಸುತ ನಡೆ ಆಶೀರ್ವಾದವ ಪಡೆಯುವೆ ಕಿರಿಯರಿಗೆ ಮಾರ್ಗದರ್ಶನ ಮಾಡು ವಿಶ್ವಾಸವನ್ನೇ ಗಳಿಸುವೆ   ಪ್ರಾಮಾಣಿಕರಿಗೆ ಧೈರ್ಯವನು ತುಂಬು ಶುಭವನ್ನೇ ಕಾಣುವೆ ಸಾಧಕರಿಗೆ ಹುರುಪನು ತೋರು ಒಳ್ಳೆಯದನ್ನೇ ಗಳಿಸುವೆ   ಬಡವರಿಗೆ ನೆಮ್ಮದಿಯನು ತರು ಖುಷಿಯನೆಲ್ಲ ಹೊಂದುವೆ  ಗೆಳೆಯರಿಗೆ ಪ್ರಿಯನಾಗಿರು ಹೊಸ ಲೋಕವನ್ನೇ ಗಳಿಸುವೆ   ಪೂಜಿಸುವರಿಗೆ ಸನಿಹನಾಗಿರು ಈಶ ಬರುವನು ಬಂಧುವೇ ಜೀವಾತ್ಮರಿಗೆ ಹೆಗಲಾಗಿರು ಧ್ಯೆಯ ಗುಣವನ್ನೇ ಗಳಿಸುವೆ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
​​​​​​