ಕುಣಿದು ಬಂದ  ನಲಿದು ಬಂದ ನಮ್ಮ ಮುದ್ದು ಕಂದ ಅತ್ತ ಇತ್ತ  ಸುತ್ತ ಮುತ್ತ ಕುಣಿದು ಕೂತ ಕಂದ   ಬಾಲ ಭಾಷೆ ಹೇಳಿ ನಮ್ಮ ಮೊಗದಿ ನಗುವ ತಂದ ಕುಡಿವ ಹಾಲ ಅರ್ಧ ಚೆಲ್ಲಿ ನೆಲದಿ ಜಾರಿ ಕಂದ   ತಾಯಿ ಬಂದು ಎತ್ತಿ ಕೊಳಲು ಮುಖದಿ ನಗುವು ಚಂದ ಊಟ ಉಣಿಸೆ ಬೊಚ್ಚು ಬಾಯಿ ನೋಡಲದುವೆ ಅಂದ -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ