ಪ್ರೀತಿಯೊಲವಿನ ಕರೆಯು ಮರೀಚಿಕೆಯಾಗಿದೆ ಗೆಳೆಯ ಮೌನದೊಲವಿನ ಸವಿಯು ಮಾಸಿಹೋಗಿದೆ ಗೆಳೆಯ   ಮಧುರದೊಲವಿನ ಸೃಷ್ಟಿಯು ಹುಸಿಯಾಗದೆ ಗೆಳೆಯ ಸವಿಯೊಲವಿನ ತಾರೆಯು ಕೊಳೆಯಾಗದೆ ಗೆಳೆಯ   ತಾಳಿಯೊಲವಿನ ತೆಕ್ಕೆಯದು ಚಿತೆಯಾಗಿದೆ ಗೆಳೆಯ ಹೂವಿನೊಲವಿನ ದುಂಬಿ ಮೌನಿಯಾಗಿದೆ ಗೆಳೆಯ   ಎದೆಯೊಲವಿನ ಕತೆಯು ಸಮಸ್ಯೆಯಾಗಿದೆ ಗೆಳೆಯ ಸ್ವಾತಿಯೊಲವಿನ ಇಳೆಯು ಅಗ್ನಿಯಾಗಿದೆ ಗೆಳೆಯ   ಈಶನೊಲವಿನ ಪ್ರೇಮವದು ಅಲೆಯಾಗಿದೆ ಗೆಳೆಯ ಸರಸದೊಲವಿನ ದ್ವೇಷವು ಅತಿಯಾಗಿದೆ ಗೆಳೆಯ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ