ಪ್ರೀತಿ ಇಲ್ಲದ ಮೇಲೆ, ಪ್ರಾರ್ಥನೆ ಯಾತಕೆ ಪ್ರೇಮ ಅಳಿದ ನಂತರ, ಒಲುಮೆ ಯಾತಕೆ    ಕನಸಲ್ಲಿ ಮೂಡಿದ ಭಾವ,ನನಸಲ್ಲಿ ಎಲ್ಲಿದೆ  ಜೀವನ ಸುಡುತಿರುವಾಗ, ದುರಾಸೆ ಯಾತಕೆ   ಯೌವನ ಸವಿಯು, ಮತ್ತೊಮ್ಮೆ ಬರುವುದೆ ಸೌಂದರ್ಯ ಬದುಕಿದ್ದರೂ,ನೆರಳೆ ಯಾತಕೆ    ಚಿತ್ತವು ಕದಡಿದಾಗ, ರಮಣಿಗೆ ಮೋಹವೆ  ಬೆಸುಗೆಯ ಬಂಧನವನ್ನು,ತರುವೆ ಯಾತಕೆ    ಹೊತ್ತು ಕಂತಿದಾಗ,ಚಂದ್ರ ಬರುವನೇ ಈಶ ಹೃದಯವೇ ಇಲ್ಲದ ಮೇಲೆ,ಹೆಗಲೆ ಯಾತಕೆ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ