ಒಂದು ಗಝಲ್
ಬರಹಗಾರರ ಬಳಗ
ಸೆಪ್ಟೆಂಬರ್ ೨೭, ೨೦೨೫
೨ ವೀಕ್ಷಣೆಗಳು
ಧೈರ್ಯವಾಗಿರು ಎಂದವರ ಕಾಲು ಹಿಡಿಯುವೆ ನಾನು
ದ್ರೋಹ ಬಗೆಯುವರ ತುಳಿದು ಬಡಿಯುವೆ ನಾನು
ಮನುಜ ಜನುಮ ದೊಡ್ಡದೋ ಎಂದವರು ನಮ್ಮವರೇ
ಬೆನ್ನಿನ ಹಿಂದೆಯೇ ನಗುವವರ ಹಳಿಯುವೆ ನಾನು
ನನಗೆ ನೀನು ನಿನಗೆ ನಾನು ಎನ್ನುವರು ಎಲ್ಲಿಹರೋ
ಶಿರವಬಾಗಿ ಕರವನು ಮುಗಿದು ಕರೆಯುವೆ ನಾನು
ಒಂದೇ ನೆಲದಲಿ ಇರುವ ನಾವು ಮನುಜರಲ್ಲವೇನು
ಜಾತಿ ದ್ವೇಷವ ಮಾಡುವವರ ಮರೆಯುವೆ ನಾನು
ದೇಶ ನಮ್ಮದು ನಾಡು ನಮ್ಮದು ಭಾಷೆ ನಮ್ಮದು ಈಶ
ಕ್ಲೇಶವಿಲ್ಲದೆ ಎಲ್ಲರೂ ಬದುಕಿದಾಗ ಬೆರೆಯುವೆ ನಾನು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೨೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬