ಒಂದು ಗಝಲ್
ಬರಹಗಾರರ ಬಳಗ
ಸೆಪ್ಟೆಂಬರ್ ೨೮, ೨೦೨೫
೮ ವೀಕ್ಷಣೆಗಳು
ಮೋಡಕ್ಕೆ ತಂಪದುವು ತಾಗೆ ಹಾಗೆ ನಿನ್ನ ಯೌವನ
ಮದವೇರಿದ ಸಲಗದ ಬೇಗೆ ಹಾಗೆ ನಿನ್ನ ಯೌವನ
ಉಪದೇಶಕ್ಕೆಂದು ನಮ್ಮಲ್ಲಿ ನೂರಾರು ಜನರಿಹರೇಕೆ
ಮೊಗ್ಗೊಂದು ಅರಳಿತೊ ಹೀಗೆ ಹಾಗೆ ನಿನ್ನ ಯೌವನ
ನಮ್ಮೊಲವು ಸವಿ ಆಗಮನಕ್ಕೆ ಕಾದಿರುವ ಪಕ್ಷಿಗಳಂತೆ
ಜಲಧಾರೆಯದು ರಭಸದಿ ಸಾಗೆ ಹಾಗೆ ನಿನ್ನ ಯೌವನ
ಸೊಕ್ಕದು ಬೋರ್ಗರೆವ ಜಲಪಾತದಂತೆ ದುಮುಕುತ್ತವೆ
ಮುತ್ತೆಲ್ಲವು ಮತ್ತೇರಿದಂತೆ ಹೋಗೆ ಹಾಗೆ ನಿನ್ನ ಯೌವನ
ತೀರದಲ್ಲಿಹ ಸನಿಹಕ್ಕೆ ಜಲವದುವು ಅಪ್ಪಳಿಸಿದಂತೆ ಈಶಾ
ಬಾಳೆಯ ಗಿಡವದು ನಾಚುತ ಬಾಗೆ ಹಾಗೆ ನಿನ್ನ ಯೌವನ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೨೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬