ಕನಸು ಇಹುದು
ಬರಹಗಾರರ ಬಳಗ
ಸೆಪ್ಟೆಂಬರ್ ೨೮, ೨೦೨೫
೧೪ ವೀಕ್ಷಣೆಗಳು
ಕನಸು ಇಹುದು ಚೆಲುವ ಕಡೆಗೆ
ನಡೆಯ ಬೇಕು ನಾನು
ಗಗನ ಕುಸುಮ ಸಿಗುವ ಎಡೆಗೆ
ಸಾಗುತಿರುವೆ ನೀನು
ಮನಸು ತೆರೆದು ಹೇಳಬೇಕು
ನಯನದೊಳಗೆ ನೋಟ
ಬಾನ ಬಣ್ಣ ಇರುವ ಸಮಯ
ನೋಡಬೇಕು ತೋಟ
ತಾರೆ ಅಂದ ಚೆಂದ ಇಹುದು
ಜೊತೆಗೆ ಇರುವ ಬಾನು
ಮುದದಿ ಪ್ರೇಮ ಸಿಗಲು ಕೊನೆಗೆ
ಪ್ರೀತಿ ಸವಿಯೆ ಜೇನು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೨೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬