ಹನಿಗಳು ಸರ್ ಹನಿಗಳು !
ಬರಹಗಾರರ ಬಳಗ
ಸೆಪ್ಟೆಂಬರ್ ೩೦, ೨೦೨೫
೯ ವೀಕ್ಷಣೆಗಳು
ಹೇಗೋ ಇದ್ದವರು
ಹೇಗಾಗಿ ಬಿಡುತ್ತಾರೆ
ಕೆಲವರು ಸ್ವಂತಿಕೆಯಿಂದ
ಇನ್ನೂ ಹಲವರು
ಕೈ ಕಾಲು ಹಿಡಿಯುವುದರಿಂದ
ಮೊದಲಿನವರು ಉಳಿಯುತ್ತಾರೆ
ಎರಡನೆಯವರು ಅಳಿಯುತ್ತಾರೆ
ಇಲ್ಲ, ಉಪಕರಿಸಿದವರನ್ನು
ಮರೆತು ಬಿಡುತ್ತಾರೆ !
***
ರಾತ್ರೆ
ಕಳೆದು
ಹಗಲಾದಂತೆ
ಉಟ್ಟ
ಬಟ್ಟೆಯಲ್ಲೇ
ಹೊರ
ಹೊರಟಿದ್ದೆ
ಜಗ
ಸುತ್ತಲು
ಬುದ್ಧನಾಗಲು !
ಆದರೆ
ನಾ
ನಗಲೇ
ಇಲ್ಲ
ಬುದ್ಧನಾಗಲೂ
ಇಲ್ಲ
ಮನುಷ್ಯನಾದೆ
ಮನುಷ್ಯನಂತೇ
ಹೋದೆ !
***
ನಾನು
ಮತ್ತು
ನನ್ನ
ಬರಹಗ
ಳೇ
ಹೀಗೆ
ಹೇಗೆಂದರೆ ?
ಕೆಟ್ಟವರಿಗೆ
ಹರಾಮ್ !
ಒಳ್ಳೆಯವರಿಗೆ
ಹರೇ
ರಾಮ !!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬