ಒಂದು ಗಝಲ್
ಬರಹಗಾರರ ಬಳಗ
ಅಕ್ಟೋಬರ್ ೨೯, ೨೦೨೫
೪ ವೀಕ್ಷಣೆಗಳು
ಬಣ್ಣದ ಹೂಗಳ ಘಮಕೆ ನಡೆವ ಹಾದಿಯ ಮರೆಯದಿರು ನೀನು
ತಣ್ಣನೆ ಗಾಳಿಗೆ ಸೋತು ಸಂತಸವ ತೊರೆಯದಿರು ನೀನು
ದೀಪದ ಅಡಿಯಲ್ಲಿ ಕತ್ತಲೆ ಇರುವುದು ಸಹಜವಲ್ಲವೇ
ಉರಿಯುವ ಜ್ಯೋತಿಯ ಮೇಲೆ ನೀರನು ಸುರಿಯದಿರು ನೀನು
ಆಡುವ ಪಿಸು ಮಾತುಗಳ ದನಿಯಲಿ ಸತ್ಯವ ಕಂಡೆಯೇನು
ನೀಡಿದ ಭಾಷೆಯನು ಮರೆತು ಕನಸಿನ ಮನೆಯ ಕೆಡಿಸದಿರು ನೀನು
ಸೋತು ಬಳಲಿದ ಮನುಜಗೆ ಸಾಂತ್ವನದ ನುಡಿಗಳು ಬೇಕಲ್ಲವೇ
ಸಹಾಯ ಮಾಡಿದ ಕೈಗಳನು ಅವಮಾನಿಸಿ ಹಳಿಯದಿರು ನೀನು
ಸಜ್ಜನರ ಸಂಗ ಹೆಚ್ಚೇನು ಸವಿದಂತೆ ನಂಬಿರುವಳು ರತ್ನ
ಬದುಕಿನ ಪುಟಗಳಲಿ ಕರಿಯ ನೆರಳಾಗಿ ಬೆರೆಯದಿರು ನೀನು
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಅಕ್ಟೋಬರ್ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬