ಮೈ ಮೂಳೆಯ ಮಣಿಸುತ  ಯೋಗವ ಮಾಡುತ  ಮನದಿಂದಣಿಯೇ  ಉಲ್ಲಾಸ...    ಚಟುವಟಿಕೆಗಳೇ  ಮನಸನು ತಣಿಸುವ  ಅಹಂನು ಕಳೆಯುವ  ಚೆಲ್ಲಾಟ…   ನಾಲ್ಕು ದಿಕ್ಕುಗಳ  ಸುತ್ತನುವರೆದು  ಭೂಮಿಯ ಹಾಗೆ  ಗೋಲಾಟ...   ಅಕ್ಕರೆ ಹೊಂದಿ  ಹಕ್ಕಿಗಳಾಗುವ  ಸಮಯವ ಮರೆವ  ಗಾಳಿಪಟ...   ತ್ರಿಕೋನಾಕಾರದ  ಲಂಬಾಕೃತಿಯ  ಸಾಹಸ ಮೆರೆವ  ಚದುರಂಗದಾಟ...    ಹೊಟ್ಟೆಯ ಎಳೆದು  ಬೆನ್ನನು ಬಾಗಿಸಿ  ಪರಿಶ್ರಮ ಪಡುವ  ಚಿನ್ನರ ಆಟ...   -ಅಕ್ಟರ್ ಸಿ. ಕಾಲಿಮಿರ್ಚಿ, ಭಾಗ್ಯನಗರ ಚಿತ್ರ ಕೃಪೆ: ಇಂಟರ್ನೆಟ್ ತಾಣ