ಒಂದು ಗಜಲ್
ಬರಹಗಾರರ ಬಳಗ
ಅಕ್ಟೋಬರ್ ೩೧, ೨೦೨೫
೫ ವೀಕ್ಷಣೆಗಳು
ಮೌನದೊಳಗಿನ ಅರ್ಥ ಬಿಡಿಸಿರುವ ಬಗೆಗೆ ಕನಸು ಬರುವುದೇ ಗೆಳತಿ
ಚಿಂತೆಯಿರದಾ ಯೋಗ ಸಂಕುಚಿತ ಭಾವದಿ ನನಸು ಸಿಗುವುದೇ ಗೆಳತಿ
ಸಂತಸದ ಚೆಲುವಿನಲಿ ರೂಪ ಯೌವನವೇರಿ ಬೋರ್ಗರೆದು ಸಾಗುವುದು ನೋಡು
ಸೌಂದರ್ಯ ಮನಸಿನ ನವಯುಗದ ಮೋಹದೊಳು ಗಂಡ ಒಲವು ಕಾಣುವುದೇ ಗೆಳತಿ
ಹೃದಯದೊಳಗಿನ ಸವಿಯ ತೆರೆದು ಸಂತಸ ಪಡುತ ಹೊರಟು ಬಂದಿರುವೆನಿಂದು
ಬೆತ್ತಲಾಗಿರುವ ಮನಸ್ಥಿತಿಯ ತನುವಿನಾಳದ ರೂಪದಲಿ ತಿನಿಸ ತಿನ್ನುವುದೇ ಗೆಳತಿ
ಕಣ್ಣಿನೊಳಗಿನ ಹನಿಯು ಜಾರುತಿರಲೂ ಸುತ್ತ ತಡೆಯುವರು ಯಾರಿಹರು ಹೇಳು
ಪ್ರೀತಿಯರಳಿದರೂ ಇಂದು ಗುಲಾಬಿಯ ಮುಳ್ಳು ಚುಚ್ಚದೆ ಮಲಗುವುದೇ ಗೆಳತಿ
ಸಂಸಾರವೆನ್ನುವ ಸಂತೆಯಲ್ಲಿನ ನಿದಿರಾದೇವಿಯ ಮಡಿಲ ಅಪ್ಪುಗೆಯೆ ಈಶಾ
ಪ್ರೇಮವೆನ್ನುವ ಅಮಲಿನ ಸಂಕೇತದ ಧ್ವನಿಗಿಂದು ಧನಸ್ಸು ಎತ್ತುವುದೇ ಗೆಳತಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಅಕ್ಟೋಬರ್ ೩೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬