ಜೀವನದ ಪಯಣದಲಿ...
ಬರಹಗಾರರ ಬಳಗ
ನವೆಂಬರ್ ೦೬, ೨೦೨೫
೭ ವೀಕ್ಷಣೆಗಳು
ಜೀವನದ ಪಯಣದಲಿ ಜೊತೆಯಾಗಿ ನೀ ಬಂದೆ
ನನ್ನ ಒಲವಿನ ರಾಣಿ ನೀಲವೇಣಿ
ಸವಿಯಾಸೆ ತುಂಬಿರಲು ಬಳಿ ನೀನು ನಿಂತಿರಲು
ಕೈ ಹಿಡಿದೆ ಬೆಸುಗೆಯೊಳು ನೀಲವೇಣಿ
ಕನಸ ಒಳಗಿನ ನನಸು ಬೆರೆತು ಹೋಗಿಹ ಸಮಯ
ಸುಂದರಾಂಗಿಯೆ ಸಖಿಯೆ ನೀಲವೇಣಿ
ಬಯಸಿ ಬಂದಿಹ ಸಮಯ ಒಲವಿನಿಂದಲೆ ಕರೆದೆ
ಮೆತ್ತನೆಯ ಬೆಸುಗೆಯೊಳು ನೀಲವೇಣಿ
ಹತ್ತು ಊರಲಿ ತಿರುಗಿ ಕೋಟೆ ಕೊತ್ತಲ ಹತ್ತಿ
ಮೈ ಮರೆತು ಕುಳಿತಿಹೆವು ನೀಲವೇಣಿ
ಒಡಲ ಸವಿ ಮರಳುತಲೆ ಪ್ರೀತಿಯೊಡನೇ ನಲಿಯೆ
ಹೃದಯದಾಳದಿ ಬೆರೆತೆ ನೀಲವೇಣಿ
ಮಧುರ ಭಾವದ ಮನೆಯ ಒಳಗೆ ಸೇರುತ ಸಾಗೆ
ಮುದ್ದು ಕಂದನ ಉದಯ ನೀಲವೇಣಿ
ಹೀಗೆ ಬದುಕದು ಇರಲು ನಿನ್ನ ಬಲವದು ಬರಲು
ಚಂದ್ರ ತಾರೆಯರ ತೆರದಿ ನೀಲವೇಣಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ನವೆಂಬರ್ ೦೬, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬