ಒಂದು ಗಝಲ್
ಬರಹಗಾರರ ಬಳಗ
ನವೆಂಬರ್ ೧೦, ೨೦೨೫
೩ ವೀಕ್ಷಣೆಗಳು
ಕನ್ನಡ ತಾಯಿಯ ಮಡಿಲ ಮಕ್ಕಳು ಹೇಳೋಣ ಪುಟ್ಟ
ಹೊನ್ನುಡಿಯ ಮಾತುಗಳನು ನಾಲಿಗೆಯೊಳು ನಿತ್ಯವೂ ಆಡೋಣ ಪುಟ್ಟ
ಕರ್ನಾಟಕ ಏಕೀಕರಣದ ಕನಸು ನಿಜವಾದ ದಿನದ ಸಂಭ್ರಮವಲ್ಲವೇ
ಮುನ್ನುಡಿಯ ಬರೆಯುತ್ತ ಒಂದಾಗಿ ನಡೆ ನುಡಿಯಲಿ ಬೆರೆಯೋಣ ಪುಟ್ಟ
ಪಂಪ ರನ್ನ ರಾಘವಾಂಕ ಪುಟ್ಟಪ್ಪರು ನಾಡಿನ ಕಲಶಗಳು
ಕಂಪನು ಸೂಸುತ ನೆಲಜಲ ವನು ಮರೆಯದೆ ಗೌರವಿಸೋಣ ಪುಟ್ಟ
ಹಿರಿಯರ ಹೆಜ್ಜೆಯ ಗುರುತನ್ನು ಮರೆತು ಬಾಳಿದರೆ ಕ್ಷೇಮವಿರದು
ಕಿರಿಯರಲಿ ಮಾತೃಭಾಷೆಯ ಸೊಗಡು ತುಂಬುವಂತೆ ಮಾಡೋಣ ಪುಟ್ಟ
ದೀಪದ ಜ್ಯೋತಿಯಂತೆ ಬೆಳಗುತ ಅಭಿಮಾನದಿ ಸಂಭ್ರಮಿಸುವಳು ರತ್ನ
ತನುಮನದಿ ರಕುತದಿ ಹರಿದಾಡುತ ಮೆರೆಸೋಣ ನಾವಿಂದು ಪುಟ್ಟ
-ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ನವೆಂಬರ್ ೧೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬