ನೀವು ಬರೆದ ಕವನವ ಓದಲು ಕಷ್ಟವೆನಗೆ ! ನಾನು ಬರೆದ ಕವನವ ಓದಲು ಕಷ್ಟ ನಿಮಗೆ! ಕಾರಣ ಬಿಡಿ ನೀವು ನನಗಿದ್ದರೆ ನಾ ನಿಮಗಿಹೆ ! * ನಿನಗಿರದ ನನ್ನ  ಬಗೆಗಿನ ನೆನೆಪು ನನಗೇಕೆ ಗೆಳತಿ ನಿನ್ನೊಡಲ ಕುರಿತು  * ಪ್ರಕೃತಿಯನು ವಿಕೃತಿ ಮಾಡಿದವರು  ನಾವೇ ! ಸಂಸ್ಕೃತಿಗಳ ವಿಕೃತಿ ಮಾಡಿದವರು ನಾವೇ ! ಮತ್ತೇಕೆ ಬೇರೆಯವರು ಎನ್ನುವರೋ ? ನಾ ಅರಿಯೆ ! * ನಾನು ಯಾರನ್ನು ನನ್ನಷ್ಟಕ್ಕೇ ನಂಬೆನು ಸಾವ ದಿನವು ! * ಕಲ್ಲಿಗೂ ಜೀವ ಬರುತ್ತದೆ ನೋಡಯ್ಯಾ ಬಿಸಿಯಾದಾಗ ! * ಉಟ್ಟ ಬಟ್ಟೆಗೆ ಇರುವ ಬೆಲೆಯಿಂದು ಮನುಜಗಿಲ್ಲ ! * ರಸ್ತೆಯಲ್ಲಿಯೆ ಉಗಿಯುತ್ತಾರೆ ಜನ ತಾಂಬೂಲವನ್ನು ! * ಕಷ್ಟದಲ್ಲಿಹ ಜನರಿಗೆ ಸ್ಪಂಧಿಸಿ ಜಾಣರಾಗಿರಿ ! * ಎರಡೂ ಹನಿಗಳೆ ಎಲೆಯ ಮೇಲಿನವು ಮುತ್ತುಗಳು ! ಬೇಲಿಯ  ಮೇಲಿನವು ಮುಳ್ಳುಗಳು ! * ಇಂದಿನ ದಿನಗಳಲ್ಲಿ  ಐದು ವರುಷದ ಮಗುವಿನಲ್ಲಿರುವ ಜ್ಞಾನದ ಮುಂದೆ  ಹಿರಿಯರಾದ ನಾವು  ತೀರಾ ಕುಬ್ಜರಾಗಿ  ಕಾಣುತ್ತಿದ್ದೇವೆ!  ಈ ಅಂತರದಿಂದಲೇ ಅವರ ಮತ್ತು  ನಮ್ಮ ಸಂಬಂಧಕ್ಕೆ  ಚ್ಯುತಿ ಬಂದಿದೆ !! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ