ನಾನು ಎನ್ನುವುದು ಹೀಗೆಯೇ ಎಂದಿಗೂ ಎನ್ನಲಾಗದು ! ನಾನು ನಾನಾಗಿಯೇ ಇರುವೆ ಅನ್ನುವುದೂ ಹೀಗೆಯೇ ಎಂದಿಗೂ ಎನ್ನಲಾಗದು !!   ಬದಲಾವಣೆ ಬುದ್ದಿವಂತ ಇರುವಲ್ಲಿ ಆಗುವುದಿಲ್ಲ ನಿಜ ! ಅತೀ ಬುದ್ದಿವಂತ ಇರುವಲ್ಲಿ ಬದಲಾಗದೆ ಇರುವುದೂ ಇಲ್ಲ ; ಇಲ್ಲದಂತೆ ಸಾಮಾನ್ಯ ಜನ ಬದುಕುವರೂ ಎಲ್ಲ , ಜಗತ್ತೆ ಸಂಭ್ರಮಿಸಿದಂತೆ!!   ನ್ಯಾಯ ಹೇಳುವವರ ಬಾಯಿಗಿಂದು ಬೀಗ ಬಿದ್ದಿದೆ ನೋಡಿ ? ನಾನೇ ಇರುವೆನಲ್ಲ....?! ಎಲ್ಲವನ್ನೂ ಕಳೆದುಕೊಂಡು ಮೂಲೆ ಕಂಬವ ಹಿಡಿದು ಕುಳಿತಿಲ್ಲವೆ ? ಪ್ರಜಾಪ್ರಭುತ್ವದ  ಯಾವೊಬ್ಬನೂ ನಮ್ಮ  ಗಮನಿಸಲೇ ಇಲ್ಲ; ಸಹಾಯದ ಮಾತಂತೂ ದೂರವೇ ಉಳಿಯಿತು , ಹಕ್ಕಿಯಂತೆ ಆಗಸಕ್ಕೆ ಹಾರಿ ಹೋಯಿತು !!   ನೋವುಗಳು ಮಡುಗಟ್ಟಿದ ಸಮಯ ಯಾರೂ ಯಾರನ್ನೂ ನೋಯಿಸದಿರಿ ಬಿಟ್ಟು ಬಿಡಿ ಅವರಷ್ಟಕ್ಕೆ ಅವರಿರಲಿ ! ಏನೋ ಒಂದು ಧ್ಯಾನವೋ ಚಿಂತೆಯೋ, ಚಿಂತನೆಯೋ ಮಾಡಿಕೊಂಡಿರಲಿ ಬಿಡಿ ಹಾಗೆಯೇ ಇರಲಿ ಬಿಡಿ ಬಿಡಿ ; ಅಂತವರ ಬಗ್ಗೆ ಯೋಚಿಸುವುದನ್ನೇ ಬಿಡಿ! ಯಾಕೆಂದರೆ ?  ಬದುಕೆಂದರೆ ,ಅದು ಮೂರು ದಿನದ ಸಂತೆ ಗೌಜಿ ಗದ್ದಲದ ನಡುವೆ ಪಯಣ ಮುಂದೆ ಇದ್ದೇ ಇದೆ ಮಸಣ ಮಸಣ ಮಸಣ !   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ